K2kannadanews.in
Crime News ಹುಣಸಗಿ : ಜಮೀನು ವಿಚಾರಕ್ಕಾಗಿ ಹೊಡೆದಾಡಿ ಠಾಣೆ ಮೆಟ್ಟಿಲೇರಿದ ಪ್ರಕರಣದಲ್ಲಿ ಪಿಎಸ್ಐ ರಾಜಶೇಖರ ರಾಥೋಡ್ ಮೃತ ವ್ಯಕ್ತಿಯ ಮೇಲೆ ಹಲ್ಲೇ ಮಾಡಿದ್ದರಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಠಾಣೆ ಮುಂದೆ ಶವ ಇಟ್ಟು ಪ್ರತಿಭಟನೆ ಮಾಡಿ ಅಸಮಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಗೌಡಪ್ಪ ಚವನಭಾವಿ (35) ಜಮೀನು ವಿಚಾರಕ್ಕಾಗಿ ಹೊಡೆದಾಡಿ ಮೃತ ದುರ್ದೈವಿ. ಜಮೀನು ವ್ಯಾಜ್ಯ ಬಗೆಹರಿಸುವಂತೆ ಠಾಣೆ ಮೆಟ್ಟಿಲೇರಿದವನ ಮೇಲೆ ಪಿಎಸ್ಐ ಹಲ್ಲೇ ಮಾಡಿದ್ದಾರೆ ಎಂದು ಗಂಬೀರ ಆರೋಪ ಮಾಡಲಾಗುತ್ತಿದ್ದು, ನಾರಾಯಣಪುರ ಪೊಲೀಸ್ ಠಾಣೆ ಎದುರು ಮೃತದೇಹ ಇಟ್ಟು ಪ್ರತಿಭಟನೆ ಮಾಡಿದ್ದಾರೆ.
ಜಮೀನು ವ್ಯಾಜ್ಯ ಬಗೆಹರಿಸುವಂತೆ ಠಾಣೆ ಮೆಟ್ಟಿಲೇರಿದ್ದ ಗೌಡಪ್ಪ, ಈ ವೇಳೆ ಗೌಡಪ್ಪನ ಮೇಲೆ ಪಿಎಸ್ಐ ರಾಜಶೇಖರ ರಾಥೋಡ್ ಹಲ್ಲೇ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದೇ ಗುಂಗಿನಲ್ಲಿ ಜಮೀನಿಗೆ ನೀರು ಹಾಯಿಸಲು ಹೋದ ಗೌಡಪ್ಪ ಮೇಲೆ, ಪಕ್ಕದ ಜಮೀನಿನ ನೀಲ್ಲಪ್ಪ ಸೇರಿ ಮೂವರಿಂದ ಗೌಡಪ್ಪ ಮೇಲೆ ಮತ್ತೆ ಹಲ್ಲೇಯಾಗಿದೆ. ಹಲ್ಲೆಗೊಳಗಾದ ಗೌಡಪ್ಪನನ್ನ ಬಾಗಲಕೋಟ ಮೂಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೇ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದಾನೆ ಗೌಡಪ್ಪ.
ನ್ಯಾಯಕ್ಕಾಗಿ ಕಚೇರಿಗೆ ಹೋದವನ ಮೇಲೆ ಹಲ್ಲೇ ಮಾಡಿರುವ ಪಿಎಸ್ಐ ರಾಜಶೇಖರ ರಾಥೋಡ್ ವಿರುದ್ಧ ಅಮಾನತ್ತಿಗೆ ಆಗ್ರಹಿಸಿ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೆ ಜಮೀನಿನಲ್ಲಿ ಹಲ್ಲೆ ಮಾಡಿರುವಂತಹ ನಾಲ್ಕು ಜನರ ಮೇಲೆ ಕೂಡ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂಬುದು ಕುಟುಂಬಸ್ಥರ ಆಗ್ರಹವಾಗಿದೆ.