K2kannadanews.in
Viral video ವೈರಲ್ ಸುದ್ದಿ : ಹಾವು ಅಂದ್ರೆ ನಾವು ನೀವೆಲ್ಲ ಭಯಪಡೋದು ಸಾಮಾನ್ಯ, ಇದೆ ಹಾವಿನ ವಿಚಿತ್ರ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿವೆ. ಹಾವುಗಳು ಆಹಾರಕ್ಕಾಗಿ ಕಪ್ಪೆ, ಪಕ್ಷಿ ಸೇರಿ ವಿವಿಧ ಪ್ರಾಣ ಸಂಕುಲದ ಜೊತೆ ಕಾದಾಡುವ ವಿಡಿಯೋಗಳು ನೋಡಿದ್ದೇವೆ. ಇಲ್ಲೊಂದು ಅಪರೂಪದ ಹಸಿರು ಹಾವು ಮತ್ತು ಹಲ್ಲಿ ಕಾಳಗ ಹುಬ್ಬೇರಿಸುವಂತೆ ಮಾಡುತ್ತದೆ.
ಹೌದು, ಈ ಒಂದು ಪರಿಸರದಲ್ಲಿ ಸಾಕಷ್ಟು ಜೀವಸಂಕುಲ, ಪ್ರಾಣಿ ಸಂಕುಲಗಳಿವೆ. ಆಹಾರಕ್ಕಾಗಿ ಒಂದನ್ನು ಒಂದು ಕೊಂದು ತಿನ್ನುವುದು ಒಂದು ಪ್ರಕ್ರಿಯೆ. ಅಂತಹ ಒಂದು ಪ್ರಕ್ರಿಯೆಯಲ್ಲಿ ಕೆಲವುಬಾರಿ ಅಪರೂಪದ ವಿಡಿಯೋಗಳು ವೈರಲ್ ಆಗುತ್ತವೆ. ಇದೀಗ ವೈಲ್ಡ್ ಲೈಫ್ ವಂಡರ್ ಎಂಬ ಖಾತೆಯಿಂದ ಫೇಸ್ಬುಕ್ನಲ್ಲಿ ಅಪ್ಲೋಡ್ ಆಗಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಆ ವಿಡಿಯೋ ನೋಡುಗರನ್ನು ದಂಗಾಗುವಂತೆ ಮಾಡಿದೆ.
ಇನ್ನೂ ವಿಡಿಯೋದಲ್ಲಿ ನೋಡುವಂತೆ ಅಪರೂಪದ ಹಸಿರುಹಾವು ಹಲ್ಲಿಯನ್ನು ಆಹಾರವಾಗಿಸಿಕೊಳ್ಳಲು, ಹಲ್ಲಿಯ ಮೇಲೆ ದಾಳಿ ಮಾಡುತ್ತದೆ. ಹಲ್ಲಿಯೂ ಸಹ ಪ್ರತಿ ದಾಳಿ ಮಾಡಿ ಹಾವಿನೊಂದಿಗೆ ಸೆಣೆಸಾಡುತ್ತದೆ. ಸುಮಾರು ನಾಲ್ಕೈದು ನಿಮಿಷಗಳ ಕಾಲ ಹಾವು ಮತ್ತು ಹಲ್ಲಿ ನಡೆವೆ ಕಾಳಗ ನಡೆಯುತ್ತದೆ. ಸೆಣಸಾಡಿದ ಹಲ್ಲಿ ಕೊನೆಗೂ ಸೋಲನ್ನು ಒಪ್ಪಿಕೊಂಡು ಹಾವಿಗೆ ಆಹಾರವಾಗುತ್ತದೆ.