K2kannadanews.in
Shakthi yojane ರಾಯಚೂರು : ಬೆಂಗಳೂರಿನಿಂದ ರಾಯರ ದರ್ಶನಕ್ಕೆ ಬಂದ ಮಹಿಳೆಯರು ಬಸ್ಸುಗಳಿಲ್ಲದೆ ಕಂಟ್ರೂಲರ್ ಜೊತೆ ಜಗಳವಾಡಿದ ಘಟನೆ ಕಳೆದ ರಾತ್ರಿ ರಾಯಚೂರು ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಶಕ್ತಿ ಯೋಜನೆ ಎಫೆಕ್ಟ್ ನಿಂದ ಹೆಣ್ಮಕ್ಳು V/s ಗಂಡಸರು ಎಂಬ ನಿಟ್ಟಿನಲ್ಲಿ ಕಳೆದ ರಾತ್ರಿ ಬಸ್ ನಿಲ್ದಾಣದಲ್ಲಿ ಮಹಿಳೆಯರು, ಕಂಟ್ರೂಲರ್ ಮತ್ತು ಪುರುಷ ಪ್ರಯಾಣಿಕರ ಮಧ್ಯ ರಾತ್ರಿ 11 ಗಂಟೆ ಸುಮಾರಿಗೆ ಜಗಳವಾದ ಘಟನೆ ಜರುಗಿದೆ. ಸಾಲ ಸಾಲು ರಜೆ ಹಿನ್ನೆಲೆ ನೂರಾರು ಮಹಿಳೆಯರು ಮಂತ್ರಾಲಯಕ್ಕೆ ಬಂದಿದ್ದರು, ರಾಯರ ದರ್ಶನ ಪಡೆದು ವಾಪಸ್ ಹೋಗಲು ರಾಯಚೂರು ನಿಲ್ದಾಣಕ್ಕೆ ಆಗಮಿಸಿದ್ದರು. ಆದ್ರೆ ನೇರವಾಗಿ ಬೆಂಗಳೂರಿಗೆ ಬಸ್ಸುಗಳು ಇಲ್ಲದ ಕಾರಣ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕಾದು ಕಾದು ಸುಸ್ತಾದ ನೂರಾರು ಮಹಿಳೆಯರು ಮಧ್ಯರಾತ್ರಿ ವಿಶೇಷ ಬಸ್ ಬಿಡಲು ಒತ್ತಾಯಿಸಿ ಕಂಟ್ರೂಲರ್ ಜೊತೆ ಜಗಳಕ್ಕಿಳಿದಿದ್ದಾರೆ.
ಸುಮಾರು ಹೊತ್ತು ಕಂಟ್ರೂಲರ್ ನ ತರಾಟೆಗೆ ತೆಗೆದುಕೊಂಡ ಮಹಿಳೆಯರು ಮನ ಬಂದಂತೆ ಬೈಯ್ದಾಗ, ಕೊಪಗೊಂಡ ಕಂಟ್ರೂಲರ್ ನಾವು ಸಿಬ್ಬಂದಿಗಳು ನಮ್ಮ ಕೈಯಲ್ಲಿ ಬಸ್ ಇರುವುದಿಲ್ಲ, ಡಿಸಿಗೆ, ಸಿದ್ದರಾಮಯ್ಯನಿಗೆ ಕೇಳಿ ನಾನೇನು ಮಾಡಲಿ ಎಂದಿದ್ದಾರೆ. ಈ ವೆಳೆ ಮಹಿಳೆಯೂ ಕೋಪಗೊಂಡು ಸಿದ್ದರಾಮಯ್ಯನ ಕೇಳ್ತಿವೋ, ಅವರಮ್ಮನಿಗೆ ಕೇಳ್ತಿವೊ ನೀವು ಬಸ್ ವ್ಯವಸ್ತೆ ಮಾಡಿ ಎಂದು ರೋಪ್ ಹಾಕಿದ್ದಾಳೆ. ಈ ವೇಳೆ ಎರಡು ವಿಶೇಷ ಬಸ್ ವ್ಯವಸ್ಥೆ ಮಾಡಿದರೂ ಸಾಲದು ಇನ್ನೂ ಬಸ್ ತರಿಸಿ ಎಂದಾಗ ಪುರುಷ ಪ್ರಯಾಣಿಕರು ಕಂಟ್ರೂಲರ್ ಬೆಂಬಲಕ್ಕೆ ನಿಂತು ಮಹಿಳೆಯರಿಗೆ ಬೈಯ್ದು ಕಳಿಸಿದ್ದಾರೆ.