K2kannadanews.in
Trading company ರಾಯಚೂರು : ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಬಡ್ಡಿ (Interest) ಆಸೆ ತೋರಿಸಿ ಹೂಡಿಕೆದಾರರಿಗೆ (Investors) ಅನ್ಯಾಯ (Injustice)ಮಾಡುತ್ತಿದೆ ಎಂಬ ಆರೋಪ (Accusation) ಹೊತ್ತ ದರ್ವೇಶ್ ಕಂಪನಿ (Darvesh company) ವಿರುದ್ಧ ತನಿಖೆ ಚುರುಕಾಗಿದೆ. ಇತ್ತೀಚಿಗಷ್ಟೇ ಒಂದು ವಿಡಿಯೋ ಮೂಲಕ ಹಣ ನೀಡುತ್ತೇನೆ ಎಂದಿದ್ದ ಮಾಲೀಕ ಮಹಮ್ಮದ್ ಹುಸೇನ್ ಸುಜಾ ಈಗ ಎಲ್ಲಿದ್ದಾನೆ ಎಂಬುದು ಪ್ರಶ್ನೆಯಾಗಿದೆ.
ಹೌದು ರಾಯಚೂರು (Raichur) ಜಿಲ್ಲೆಯಾದ್ಯಂತ ಸುಮಾರು 500 ರಿಂದ 600 ಕೋಟಿ ರೂಪಾಯಿ ಈ ಒಂದು ದರ್ವೇಶ್ ಕಂಪನಿಯಲ್ಲಿ ಹೂಡಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೇ ಗ್ರಾಮೀಣ ಪೊಲೀಸ್ ಠಾಣೆಯ (Rural police station) ಅಧಿಕಾರಿಗಳು ಕಂಪನಿಗೆ ಸಂಬಂಧಿಸಿದ ಮೂವರು ವ್ಯಕ್ತಿಗಳ ವಶಕ್ಕೆ ಪಡೆದಿದ್ದರು. ಮೂರು ಆರೋಪಿಗಳನ್ನು ಸಿಐಡಿ (CID) ಅಧಿಕಾರಿಗಳಿಗೆ ಹತ್ತಾಂತರಿಸಿದ್ದರು. ವಶಕ್ಕೆ ಪಡೆದ ಆರೋಪಿಗಳನ್ನ ನ್ಯಾಯಾಲಯಕ್ಕೆ(Court) ಹಾಜರುಪಡಿಸಿ ಬಬ್ಲು ಎಂಬುವ ಆರೋಪಿಯನ್ನ ಆಗಸ್ಟ್ 2ರವರೆಗೆ ಸಿಐಡಿ ಕಸ್ಟಡಿಗೆ ಪಡೆದಿದ್ದಾರೆ.
ಎಲ್ಲ ಬೆಳವಣಿಗೆಗಳ ಮಧ್ಯೆ ಇತ್ತೀಚಿಗಷ್ಟೇ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಡುವ ಮೂಲಕ, ಮಾಲಿಕ (Owner) ಮಹಮ್ಮದ್ ಹುಸೇನ್ ಸುಜಾ ಕಂಪನಿಯಲ್ಲಿ ಒಂದಷ್ಟು ಸಮಸ್ಯೆಗಳಿದ್ದವು (Problems), ಅವುಗಳನ್ನು ನಾವು ಸರಿಪಡಿಸಿಕೊಂಡು ಮುಂದೆ ಸಾಗುತ್ತಿದ್ದೆವು. ಅಲ್ಲದೆ ನಿಮ್ಮ ಹಣ ವಾಪಸ್ ಕೊಡುತ್ತೇನೆ ಎಂದು ಹೇಳಿದ ಮಾಲೀಕ, ಇದೀಗ ಯಾರ ಕೈಗೂ ಸಿಗುತ್ತಿಲ್ಲ ಹಾಗಾಗಿ ಹೂಡಿಕೆದಾರರಲ್ಲಿ ಮಾಲಿಕ ಎಲ್ಲಿ ಹೋಗಿದ್ದಾನೆ ಎಂಬ ಪ್ರಶ್ನೆ ಕಾಡುತ್ತಿದೆ.