This is the title of the web page
This is the title of the web page
Crime NewsVideo News

ಹಿಂಬದಿ ಸವಾರನ ಕಾಲಿನ ಮೇಲೆ ಟಿಪ್ಪರ್ ಲಾರಿ ಚಕ್ರ ಹರಿದು ತೀವ್ರ ರಕ್ತಸ್ರಾವ


K2 ಕ್ರೈಂ ನ್ಯೂಸ್ : ರಾಜ್ಯ ಹೆದ್ದಾರಿಯಲ್ಲಿ ಬೈಕ್‌ ಹಿಂಬದಿ ಸವಾರನ ಕಾಲಿನ ಮೇಲೆ ಟಿಪ್ಪರ್ ಲಾರಿ ಚಕ್ರ ಹರಿದು ತೀವ್ರ ರಕ್ತಸ್ರಾವ ಆದ ಘಟನೆ ಇಂದು ನಡೆದಿದೆ.

ಹುಬ್ಬಳ್ಳಿ ಲಕ್ಷ್ಮೀಶ್ವರ ರಾಜ್ಯ ಹೆದ್ದಾರಿಯಿಂದ ಸಂಶಿಯಿಂದ ಕುಂದಗೋಳ ಮಾರ್ಗವಾಗಿ ಹೊರಟಿದ್ದ ಬೈಕ್ ಹಾಗೂ ಇದೇ ಮಾರ್ಗವಾಗಿ ಹೊರಟಿದ್ದ ಕಡಿ ತುಂಬಿದ ಟಿಪ್ಪರ್ ಚಕ್ರದಡಿ ಬೈಕ್ ಹಿಂಬದಿ ಸವಾರ ಬಿದ್ದಿದ್ದಾನೆ. ಈ ವೇಳೆ ಬೈಕ್‌ ಹಿಂಬದಿ ಸವಾರನ ಮೇಲೆ ಏಕಾಏಕಿಯಾಗಿ ಟಿಪ್ಪರ್ ಚಕ್ರ ಹಾಯ್ದು ತೀವ್ರ ರಕ್ತಸ್ರಾವದಿಂದ ಗಾಯಗೊಂಡ ಬೈಕ್ ಹಿಂಬದಿ ಸವಾರನನ್ನು ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳು ಸಂಶಿ ಗ್ರಾಮದ ರಾಘವೇಂದ್ರ ಪರಶುರಾಮ ಅಣ್ಣಿಗೇರಿ ಎಂದು ತಿಳಿದು ಬಂದಿದ್ದು, ಬೈಕ್‌ ಸವಾರ ಬಸವರಾಜ ಪೂಜಾರ ಎಂಬಾತ ಗಾಯಗೊಂಡಿದ್ದಾನೆ. ಈ ಅಪಘಾತ ಹೇಗೆ ನಡೆಯಿತು ಎಂಬುದು ಪೊಲೀಸ್ ತನಿಖೆಯಿಂದಲೇ ತಿಳಿಯಬೇಕಿದ್ದು, ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


[ays_poll id=3]