ರಾಜ್ಯದ ಏಕೈಕ ಕೋರ್ ಗ್ರಂಥಾಲಯ ಏನಿದು..?
![]() |
![]() |
![]() |
![]() |
![]() |
ಲಿಂಗಸೂಗೂರು : ತಾಲೂಕಿನ ಹಟ್ಟಿ ಚಿನ್ನದಗಣಿ ಗಣಿಗಾರಿಕೆ, ಖನಿಜಾಂಶ ಅಧ್ಯಯನ, ಸಂಶೋಧನಾ ಕಾರ್ಯಗಳಿಗೆ ಮಾರ್ಗದರ್ಶಿಯಾಗಿರುವ ಹಾಗೂ ವಿವಿಧ ರೀತಿಯ ಕಲ್ಲುಗಳ ಸಂಗ್ರಹವಿರುವ ‘ಕೋರ್ ಗ್ರಂಥಾಲಯ'(ಕಲ್ಲಿನ ಗ್ರಂಥಾಲಯ) ರಾಜ್ಯದ ಏಕೈಕ ಗ್ರಂಥಾಲಯವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಕಲ್ಲಿನ ಗ್ರಂಥಾಲಯವನ್ನು ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿಯು, 2011ರಲ್ಲಿ ಕಚೇರಿಯ ಹಿಂದಿರುವ ಅರ್ಧ ಎಕರೆಯಷ್ಟು ಪ್ರದೇಶದಲ್ಲಿ ನಿರ್ಮಿಸಿದೆ. ಗಣಿಗಾರಿಕೆ ಕುರಿತು ಸಂಶೋಧನೆ ಹಾಗೂ ಡ್ರಿಲ್ಲಿಂಗ್ ನಡೆಸುವ ಕೇಂದ್ರ ಸರ್ಕಾರದ ಎಂಇಸಿಎಲ್, ಜಿಎಸ್‌ಐ ಸೇರಿ ಹಲವು ಇಲಾಖೆಗಳಿಗೆ ಗಣಿಗಾರಿಕೆ ವಿಸ್ತರಣೆ, ಚಿನ್ನ ಸೇರಿ ಹಲವು ಅದಿರುಗಳ ಪತ್ತೆಯ ಅಧ್ಯಯನಕ್ಕೆ ಸಹಕಾರಿಯಾಗಲಿದೆ. ಕಂಪನಿಯ ಅನ್ವೇಷಣೆ ವಿಭಾಗದಿಂದ ಸ್ಥಾಪಿಸಲಾಗಿರುವ ಕಲ್ಲಿನ ಗ್ರಂಥಾಲಯವು, ಸಂಶೋಧನೆ ಕಾರ್ಯಗಳಿಗೆ ದಾರಿದೀಪವಾಗಲಿದೆ ಎಂದು ಹಟ್ಟಿ ಚಿನ್ನದ ಗಣಿ ಸಂಸ್ಥೆ ತಿಳಿಸಿದೆ.
1900ಕ್ಕೂ ಮುಂಚೆ ಸಮೀಪದ ವಂದಲಿ ಹೊಸೂರು ಗಣಿಗಾರಿಕೆ ಅದಿರು ಸೇರಿದಂತೆ ತೆರೆದ ಗಣಿಗಾರಿಕೆಯಿಂದ 3 ಸಾವಿರ ಅಡಿ ಆಳದವರೆಗೆ ನಡೆಸುತ್ತಿರುವ ಕಂಪನಿ ಗಣಿಗಾರಿಕೆಯ ಕಲ್ಲಿನ ಮಾದರಿಯ ದಾಸ್ತಾನು ಇರುವುದರಿಂದ ಖನಿಜ ನಿಕ್ಷೇಪಗಳ ವ್ಯವಸ್ಥಿತ ಪರಿಶೋಧನೆ, ಖನಿಜಗಳ ಅಭಿವೃದ್ಧಿ ಮತ್ತು ಸಂರಕ್ಷಣೆ, ಕಲ್ಲು ಆಧಾರಿತ ಯುರೇನಿಯಂ, ಟಂಗಸ್ಟನ್, ಚಿನ್ನ, ತಾಮ್ರ ಸೇರಿ ಖನಿಜ ಆಧಾರಿತ ಚಟುವಟಿಕೆಗಳ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನಕ್ಕೆ ಸಹಾಯಕಾರಿಯಾಗಲಿದೆ.
ರಾಜ್ಯದಲ್ಲಿರುವ ಏಕೈಕ ಕಲ್ಲಿನ ಗಣಿಗಾರಿಕೆ ಬಹುಉಪಯುಕ್ತವಾಗಿದೆ. ಇಲಾಖಾವಾರು ಸಂಶೋಧನೆ-ಉತ್ಪಾದನೆಗೆ ಮಾತ್ರವಲ್ಲದದೇ ಪ್ರವಾಸಿಗರಿಗೆ, ಗಣಿಗಾರಿಕೆ ಕುರಿತು ಗ್ರಂಥ ರಚನಾಕಾರರಿಗೆ ಉಪಯುಕ್ತವಾಗಿದೆ.
![]() |
![]() |
![]() |
![]() |
![]() |