ಮಳೆ ನೀರಿನಲ್ಲಿ ಕೊಚ್ಚಿ ಹೋದ ಐಷಾರಾಮಿ ಕಾರು : ಅಸಲಿಯತ್ತೇನು..

K 2 Kannada News
ಮಳೆ ನೀರಿನಲ್ಲಿ ಕೊಚ್ಚಿ ಹೋದ ಐಷಾರಾಮಿ ಕಾರು : ಅಸಲಿಯತ್ತೇನು..
WhatsApp Group Join Now
Telegram Group Join Now

K2kannadanews.in

Crime News : ಮಳೆಗಾಲದಲ್ಲಿ ನೀರು (water) ಮತ್ತು ಗುಡ್ಡಗಾಡು (Hill station) ಪ್ರದೇಶದಲ್ಲಿ, ಯಾವುದೇ ಕಾರಣಕ್ಕೂ ಸಾಹಸಕ್ಕೆ (Risky stant) ಮುಂದಾಗಬಾರದು ಎಂಬುದಕ್ಕೆ ಈ ವಿಡಿಯೋ ನಿರ್ದರ್ಶನವಾಗಿದೆ (Example). ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆದ ಈ ವಿಡಿಯೋದಲ್ಲಿ, ಐಷಾರಾಮಿ (HiFi car) ಕಾರು ಒಂದು ನೀರಿನಲ್ಲಿ ಕೊಚ್ಚಿ ಹೋಗಿದೆ.

ಇನ್ಸ್ಟಾಗ್ರಾಮ್ (Instagram) ಮೂಲಕ ದಾಂಡೇಲಿಯಲ್ಲಿ (Dandeeli) ನಡೆದಿರುವ ಘಟನೆ ಎಂದು ಹೇಳಲಾಗುವ, ವೀಡಿಯೋ ಒಂದು ವೈರಲ್ (Viral) ಆಗಿದೆ. ಈ ಒಂದು ವಿಡಿಯೋದಲ್ಲಿ, ಮಳೆ ಸುರಿದ ಹಿನ್ನೆಲೆಯಲ್ಲಿ ಹಳ್ಳ ಇರುವ ಸ್ಥಳದಲ್ಲಿ ರಭಸವಾಗಿ ನೀರು ಹರಿಯುತ್ತಿರುತ್ತದೆ. ಆ ಒಂದು ಐಶಾರಾಮಿ ಕಾರು ಸಾಹಸ ಮಾಡುವ ನಿಟ್ಟಿನಲ್ಲಿ ರಭಸವಾಗಿ ಹರಿಯುವ ನೀರಿನಲ್ಲಿ ಹೋಗುತ್ತಿದ್ದಂತೆ, ರಭಸಕ್ಕೆ ಕೊಚ್ಚಿ ಹೋಗಿದೆ. ಈ ವೇಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವಾಗ ಓರ್ವ ಕಾರಿನಿಂದ ಜಿಗಿದ ದೃಶ್ಯ ಮೈ ಜುಮ್ ಎನಿಸುತ್ತದೆ.

ಇಲ್ಲಿ ನಾವು ಸಾಮಾನ್ಯವಾಗಿ ಅರ್ಥ ಮಾಡಿಕೊಳ್ಳಬೇಕು, ಮಳೆಗಾಲದಲ್ಲಿ ನೀರು ಮತ್ತು ಗುಡ್ಡಗಾಡ ಪ್ರದೇಶದಲ್ಲಿ ಇಂತಹ ಸಾಹಸಕ್ಕೆ ಕೈ ಹಾಕುವುದು ನಮ್ಮ ಮೂರ್ಖತನವೇ ಸರಿ ಎಂದರೆ ತಪ್ಪಾಗಲಿಕ್ಕಿಲ್ಲ‌. ಆದರೆ ಅಸಲಿಯತ್ತಿಗೆ ಈ ಒಂದು ವಿಡಿಯೋ ದಾಂಡೇಲಿಯದ್ದಲ್ಲ, ದಾಂಡೇಲಿ ನಡೆದಿದೆ ಎಂದು ಬರೆದುಕೊಂಡ ಹಾಕಲಾಗಿದೆ. ಹೊರದೇಶದಲ್ಲಿ ಕಳೆದ ಮೇ 31, 2023ರಲ್ಲಿ ಯೂಟ್ಯೂಬ್ ನಲ್ಲಿ ಹಾಕಲಾಗಿದ್ದ ವೀಡಿಯೋ ಮತ್ತೆ ಅಪ್ ಲೋಡ್ ಮಾಡಲಾಗಿದೆ.

 

WhatsApp Group Join Now
Telegram Group Join Now
Share This Article