This is the title of the web page
This is the title of the web page
Local News

ಕೊನೆ ಭಾಗಕ್ಕೆ ನೀರು ಕೊಡಲಾಗುವುದು : ಡಿಸಿ


ಸಿರವಾರ : ತುಂಗಭದ್ರಾ ಎಡದಂಡೆ ನಾಲೆಯ ಕೊನೆ ಭಾಗದ ರೈತರ ಜಮಿನುಗಳಿಗೆ ಸಮರ್ಪಕ ನೀರು ಒದಗಿಸುವ ಕಾರ್ಯದಲ್ಲಿ ಅದಿಕಾರಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಕೊನೆ ಭಾಗಕ್ಕೆ ನೀರು ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿರುವ ತುಂಗಭದ್ರಾ ಎಡದಂಡೆ ನಾಲೆಯ ಮೇಲೆ ಇಂದು ಬೆಳಗ್ಗೆ ಸಂಚಾರ ನಡೆಸಿ ನಾಲೆಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣವನ್ನು ಮಾಹಿತಿ ಪಡೆದು ವಿಕ್ಷಣೆ ಮಾಡಿದರು. ನಂತರ ಸ್ಥಳದಲ್ಲಿದ ರೈತರು ಕಳೆದ 20 ದಿನಗಳಿಂದ ನಾಲೆಗೆ ನೀರು ಬಿಟ್ಟಿಲ, ಎರಡು ದಿನ ನೀರು ಹರಿಸಿ, ಬಂದ್ ಮಾಡಲಾಗಿದೆ, ಮೆಲ್ಭಾಗದಿಂದ ಹೆಚ್ಚುವರಿ ನೀರು ತನ್ನಿ ಎಲ್ಲಾರಿಗೂ ನೀರು ತಲುಪುತ್ತದೆ, ನಮ್ಮ ಭಾಗದ ಡಿಸ್ಟ್ರಿಬ್ಯೂಟರ್ ಬಂದ್ ಮಾಡಿ ಕೆಳಭಾಗಕ್ಕೆ ನೀರು ತೆಗೆದು ಕೊಂಡು ಹೊಗಲಾಗುತ್ತಿದೆ. ನಮಗೆ ನಿಗದಿ ಮಾಡಿದ ನೀರು ಹರಿಸುವಲಿ ಅದಿಕಾರಿಗಳು ವಿಫಲರಾಗಿದ್ದಾರೆ. ನೀರು ಕೇಳಿದರೆ ನೀರಾವರಿ ಇಲಾಖೆಯ ಎಇಇ ವಿಜಯಲಕ್ಷ್ಮಿ ಯವರು ನಮ್ಮ ಮೇಲೆ ಕೇಸ್ ದಾಖಲು ಮಾಡುವುದಾಗಿ ಎದರಿಸುತ್ತಿದ್ದಾರೆ ಎಂದರು.

ನಂತರ ಮಾತನಾಡಿದ ಡಿಸಿ ಚಂದ್ರಶೇಖರ ನಾಯಕ ಎಲ್ಲಾ ರೈತರಿಗೆ ಸಮರ್ಪಕವಾಗಿ ನೀರು ಹರಿಸಲು ಪೊಲೀಸ್, ಕಂದಾಯ, ನೀರಾವರಿ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ರೈತರು ಇಂತಹವುಗಳಿಗೆ ಕಿವಿಗೊಡಬಾರದು. ರೈತರು ಇದ್ದರೆ ನಾವು, ನೀವು ಮೊದಲು ಮಿತಬೆಳೆಗೆ ನೀರು ಹರಿಸಿ ನಂತರ ಭತ್ರಕ್ಕೆ ನೀರು ಹರಿಸಲಾಗುತ್ತಿದೆ. ಮೆಲ್ಭಾಗದಿಂದ ನೀರು ತರಲಾಗುತ್ತಿದೆ. ರೈತರು ಸಹಕಾರ ನೀಡಬೇಕು ಎಂದರು.


[ays_poll id=3]