Watch video : ವಧು ವರನ ನಡುವಿನ ಆಟದಲ್ಲಿ ಸೋತ ವರನಿಂದ ವಧುವಿಗೆ ಬಿತ್ತು ಗೂಸ..!

K 2 Kannada News
Watch video : ವಧು ವರನ ನಡುವಿನ ಆಟದಲ್ಲಿ ಸೋತ ವರನಿಂದ ವಧುವಿಗೆ ಬಿತ್ತು ಗೂಸ..!
WhatsApp Group Join Now
Telegram Group Join Now

K2kannadanews.in

Viral video ವರನಿಂದ ಗೂಸ : ಮದುವೆ ಎಂದರೆ ಅದೊಂದು ಅವಿಸ್ಮರಣೀಯ ಕ್ಷಣ, ಇಲ್ಲೊಂದು ಮದುವೆ ಸ್ಟೇಜ್ ನಲ್ಲಿ ವಧು ವರರಿಗೆ ಆಟ ಆಡಿಸಲಾಯಿತು. ಆಟದಲ್ಲಿ ಸೋತವರ ವಧುವಿಗೆ ಅಲ್ಲಿಯೇ ಗೂಸಾ ಕೊಟ್ಟ ಘಟನೆ ನಡೆದಿದ್ದು, ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲಾಗಿದೆ.

X ನಲ್ಲಿ Insane Reality Leaks ಎಂಬ ಖಾತೆಯಿಂದ ಈ ಒಂದು ವಿಡಿಯೋವನ್ನು ಆಗಸ್ಟ್ 15ರಂದು ಅಪ್ಲೋಡ್ ಮಾಡಲಾಗಿದೆ. ವಿಡಿಯೋ ಆರಂಭದಲ್ಲಿ ಮದುವೆ ಸಮಾರಂಭದಲ್ಲಿ ಎಲ್ಲರೂ ಸಂತಸದಿಂದ ಭಾಗವಹಿಸಿರುವುದು ಕಂಡುಬರುತ್ತದೆ. ವಧು – ವರನಿಗೆ ಆಟವಾಡಿಸುವುದು ಸಾಮಾನ್ಯ, ಈ ವಿಡಿಯೋದಲ್ಲಿ ಅವರು ಆಟವಾಡುತ್ತಿದ್ದಾರೆ. ವಧು ಆಟದಲಿ ಗೆದ್ದಿದ್ದಾಳೆ, ಆಗ ನೆರೆದಿದ್ದ ಅತಿಥಿಗಳು ಚಪ್ಪಾಳೆ ಮೂಲಕ ಆಕೆಗೆ ಅಭಿನಂದಿಸಿದ್ದಾರೆ. ಇಷ್ಟಕ್ಕೇ ಸಿಟ್ಟಿಗೆದ್ದ ವರ ಏಕಾಏಕಿ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ಈಗಾಗಲೇ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೋದಲ್ಲಿ ಕಂಡುಬರುವಂತೆ ಕ್ಷುಲ್ಲಕ ಕಾರಣಕ್ಕೆ ರೊಚ್ಚಿಗೆದ್ದ ವರ ಆಗಮಿಸಿದ್ದ ಅತಿಥಿಗಳ ಮುಂದೆಯೇ ವಧುವಿಗೆ ಗೂಸಾ ಕೊಟ್ಟಿದ್ದು ಎಲ್ಲರನ್ನೂ ಕಂಗಾಲಾಗುವಂತೆ ಮಾಡಿದೆ.

WhatsApp Group Join Now
Telegram Group Join Now
Share This Article