K2kannadanews.in
Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ ನಿಮ್ಮ k2 ಎಕ್ಸ್‌ಪ್ರೆಸ್ ನಲ್ಲಿ ವೀಕ್ಷಿಸಿ.
ಇಂಟಿಗ್ರೇಟೆಡ್ (Intigreteded) ಕೋರ್ಸ್‌ಗಳ ಹೆಸರಿನಲ್ಲಿ ಖಾಸ ಗಿ ಪದವಿಪೂರ್ವ (PUC college) ಕಾಲೇಜುಗಳ ಶುಲ್ಕ ಹೆಚ್ಚಳವನ್ನು (opposed fee hike) ವಿರೋಧಿಸಿ, ಸರಕಾರ ಕಡಿಮೆ ಶುಲ್ಕ ನಿಗದಿಗೊಳಿಸಲು ಆಗ್ರ ಹಿಸಿ ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ರಾಯಚೂರಿನ ದೇವದುರ್ಗ ಮೂಲದ ಮಡಿವಾಳ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಶಿವರಾಜ್ ಆತ್ಮಹತ್ಯೆಗೆ ಶರಣಾಗಿದ್ದು ಅವರ ದೇಹವನ್ನು ಪತ್ತೆ ಮಾಡಲು ಪೊಲೀಸರು ಮಾಡಿದ್ದೇನು ಗೊತ್ತಾ. ದೇಹ ಪತ್ತೆಗಾಗಿ 250 ಸಿಸಿ ಕ್ಯಾಮರಾಗಳ ಪರಿಶೀಲನೆ ಮಾಡಲಾಗಿದೆ ಎಂಬ ವಿಚಾರ ತಿಳಿದು ಬಂದಿದೆ.
ರಾಯಚೂರು ನಗರದ ವಾರ್ಡ್ ನಂ.31ರ ವ್ಯಾಪ್ತಿಯಲ್ಲಿ ಬರುವ ವಡ್ಡೆಪಲ್ಲಿ ಜಿನ್ನಿಂಗ್ ಫ್ಯಾಕ್ಟರಿ ಯಿಂದ ರಾಜಕಮಲ್ ಹೋಟೆಲ್ ವರೆಗೆ ಇರುವ 80 ಅಡಿ ರಸ್ತೆಯಲ್ಲಿ ಬರುವ ಒಳಚರಂಡಿ ಕಳೆದ ಎರಡು ವರ್ಷಗಳಿಂದ ಮುಚ್ಚಿ ಹೋಗಿದ್ದು ದುರಸ್ತಿಗೊಳಿಸಬೇಕೆಂದು ಒತ್ತಾ ಯಿಸಿ ಕರವೇ(ಸ್ವಾಭಿಮಾನ ಬಣ) ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಾಯಚೂರು ನಗರದ ವಾರ್ಡ ನಂ.29 ಕ್ಕೆ ಒಳಪಡುವ ಅಲ್ಲಮ ಪ್ರಭು ಕಾಲಾನಿ, ಟೀಚರ್ಸ ಕಾಲೋನಿಗಳಲ್ಲಿ ರಸ್ತೆ, ಬೀದಿ ದೀಪ, ಚರಂಡಿ ನಿರ್ಮಾಣ ಸೇರಿ ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಬಡಾವಣೆ ನಿವಾಸಿ ಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದರು.
ರಾಯಚೂರು ನಗರದ ಮಂತ್ರಾಲಯ (Mantralaya road) ರಸ್ತೆಯಲ್ಲಿರುವ ರಿಲಯನ್ಸ್ ಟ್ರೆಂಡ್ (Reliance Trend) ಅಂಗಡಿ ಒಳನುಗ್ಗಿದ ಕಳ್ಳರು ನಗದು ಹಣ ಕಳ್ಳತನ (theft) ಮಾಡಿರುವ ಘಟನೆ ನಡೆದಿದೆ.