K2kannadanews.in
Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆದ ಸುದ್ದಿಗಳ ರೌಂಡ ಅಪ್ (Round Up) ನಿಮ್ಮ k2 ಎಕ್ಸ್ಪ್ರೆಸ್ ನಲ್ಲಿ ವೀಕ್ಷಿಸಿ..
ರಾಯಚೂರು (raichur) ನಗರದಲ್ಲಿ ಈ ಬಾರಿ ಗಣೇಶ ಚತುರ್ಥಿ (Ganesh chturti) ಅಂಗವಾಗಿ ಬೃಹತ್ (Big) ಮತ್ತು ವಿಶಿಷ್ಟವಾದ (Special) ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದೆ. ಅದರಲ್ಲೂ ಸೋಮವಾರಪೇಟೆ ವೃತ್ತದಲ್ಲಿ ಪರಿಸರ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದು ಸಾಕಷ್ಟು ಜನರನ್ನ ಆಕರ್ಷಣೆ ಮಾಡುತ್ತಿದೆ.
ಕಲ್ಯಾಣ ಕರ್ನಾಟಕ (Kalyan Karnataka) ಭಾಗದ ಏಳು ಜಿಲ್ಲೆಗಳ (District) ಸ್ಥಳೀಯ ಹಾಗೂ ಪ್ರಾದೇಶಿಕ ದಿನಪತ್ರಿಕೆಗಳಿಗೆ, ಎರಡು ಪುಟ ಜಾಹೀರಾತು ನೀಡುವಂತೆ ಕರ್ನಾಟಕ ಕಾರ್ಯನಿರತ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಭೀಮರಾಯ ಹದ್ದಿನಾಳ ಆಗ್ರಹಿಸಿದರು.
ರೈತರ (Farmers) ಬೆಳೆಗೆ ಕನಿಷ್ಠ ಬೆಂಬಲಿತ ಬೆಲೆ ಘೋಷಿಸಬೇಕು ಮತ್ತು ಕೃಷಿ ಇಲಾಖೆಯಲ್ಲಿ ಅಗತ್ಯ ಸಿಬ್ಬಂದಿ ನಿಯುಕ್ತಿಗೊಳಿಸುವಂತೆ ಆಗ್ರಹಿಸಿ, ಒಂದು ತಿಂಗಳು ಗಡುವು ನೀಡಿದ್ದು, ಈ ಪ್ರಕ್ರಿಯೆಯನ್ನು ಸರ್ಕಾರ ಪೂರ್ಣಗೊಳಿಸಿದಿದ್ದರೆ, ಜಿಲ್ಲೆಗೆ ಯಾವುದೆ ಸಚಿವರು ಬಂದರು, ಕಪ್ಪುಪಟ್ಟಿ ಪ್ರದರ್ಶನ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಶರಣಪ್ಪ ಮರಳಿ ಹೇಳಿದರು.
ರಾಜ್ಯದ ಹಗರಣಗಳು ಮತ್ತು ಗ್ಯಾರಂಟಿಗಳನ್ನು ತೋರಿಸುವ ಮೂಲಕ ರಾಜ್ಯ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳಿಗೆ ರಾಜ್ಯವನ್ನು ಮಾರುವ ಪ್ರಯತ್ನ ನಡೆಸಿದೆ ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಬಸವರಾಜ್ ಅವರು ಆರೋಪಿಸಿದರು.
ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ದಿ.15 ರಂದು ಬೆಳಿಗ್ಗೆ 10 ಗಂಟೆಗೆ, ಆಶಾಪುರ ರಸ್ತೆಯ ಶ್ರೀ ವಾಲ್ಮೀಕಿ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು, ಮಹರ್ಷಿ ವಾಲ್ಮೀಕಿ ನಾಯಕ ಕರಡು ಸಮಿತಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ ಅಸ್ಕಿಹಾಳ್ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಹಿರೇಕೋಟೆನೇಕಲ್ ಹೋಬಳಿಯ ಅಮರಾವತಿ ಗ್ರಾಮದ ಸರ್ಕಾರಿ 20ಎಕರೆ 10 ಗುಂಟೆ ಜಮೀನನ್ನು, ಅನಧಿಕೃತವಾಗಿ ಸಾಗುವಳಿ ಮಾಡುತಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಂಡು, ಅನಧಿಕೃತವಾಗಿ ಜಮೀನು ಸಾಗುವಳಿಯನ್ನು ತಡೆಹಿಡಿಯಬೇಕೆಂದು ಅಮರವತಿ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವ ಮೂಲಕ ಒತ್ತಾಯಿಸಿದರು.