K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..

K 2 Kannada News
K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..
WhatsApp Group Join Now
Telegram Group Join Now

K2kannadanews.in

Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆದ ಸುದ್ದಿಗಳ ರೌಂಡ ಅಪ್ (Round Up) ನಿಮ್ಮ k2 ಎಕ್ಸ್‌ಪ್ರೆಸ್‌ ನಲ್ಲಿ ವೀಕ್ಷಿಸಿ.

ಕಪಗಲ್ ಕ್ರಾಸ್ ಬಳಿ ಸ್ಕೂಲ್ ಬಸ್ (School bus) ಮತ್ತು ಸಾರಿಗೆ ಬಸ್ (Government bus) ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಮ್ಸ್ ಆಸ್ಪತ್ರೆಗೆ (RIMS Hospital) ಸಚಿವ ಎನ್.ಎಸ್. ಬೋಸರಾಜು ಭೇಟಿನೀಡಿ ಗಾಯಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದರು.

ಶಾಲಾ ಬಸ್ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳಿಗೆ 20 ಲಕ್ಷ ಪರಿಹಾರ ನೀಡಬೇಕು, ಮತ್ತು ಕುಟುಂಬಕ್ಕೆ ಒಂದು ಸರ್ಕಾರಿ ನೌಕರಿ ಕೊಡಬೇಕು. ಇಲ್ಲದೆ ಹೋದಲ್ಲಿ ಸಪ್ಟೆಂಬರ್ 13ರಂದು ಕುರುಡಿ ಕ್ರಾಸ್ ಬಳಿ, ರಸ್ತೆ ತಡೆದು ಪ್ರತಿಭಟನೆ ಮಾಡವುದಾಗಿ ಮಾದಿಗ ದಂಡೋರ ಸಂಘಟನೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಮಡಿವಾಳ ಸಮಾಜದ ವತಿಯಿಂದ ನಗರದ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದ್ದು, ಸೋಮವಾರ ಸಂಜೆ ವಿಸರ್ಜನೆ ಮಾಡಲಾಗುತ್ತದೆ. ಹಾಗಾಗಿ ಸಮಾಜದ ಬಾಂಧವರು ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನವಿ ಮಾಡಿದರು.

ತಾಲೂಕಿನ ಪತ್ತೆಪುರ ಗ್ರಾಮದಲ್ಲಿ ಇತ್ತೀಚಿಗೆ ಮಳೆಯಿಂದಾಗಿ, ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಕುಟುಂಬಕ್ಕೆ, ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಅವರು ಜಿಲ್ಲಾಡಳಿತದ ವತಿಯಿಂದ 5 ಲಕ್ಷ ಪರಿಹಾರ ಚೆಕ್ ವಿತರಣೆ ಮಾಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

WhatsApp Group Join Now
Telegram Group Join Now
Share This Article