K2kannadanews.in
Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ ನಿಮ್ಮ k2 ಎಕ್ಸ್‌ಪ್ರೆಸ್ ನಲ್ಲಿ ವೀಕ್ಷಿಸಿ.
ಜಾತಿ (cast) ಹೆಸರಲ್ಲಿ ಪ್ರೀತಿ (Love) ನಿರಾಕರಿಸಿದಕ್ಕೆ ಮನನೊಂದು ಯುವತಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಸಿ, ಪ್ರಮುಖ ಆರೋಪಿಯಾದ ವಿನಯರೆಡ್ಡಿ ಇವರ ಮೇಲೆ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು, ಕರ್ನಾಟಕ ಭೋವಿ ವಡ್ಡರ ಸಂಘದ ಮಹಿಳಾ ಅಧ್ಯಕ್ಷರಾದ ಶಶಿಕಲಾ ಭೀಮರಾಯ ಅವರು ಆಗ್ರಹಿಸಿದ್ದಾರೆ.
ರಾಯಚೂರು (Raichur) ನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ, ಇಂದು ತಾಲೂಕು ಮಟ್ಟದ ಕೆ ಡಿ ಪಿ (KDP) ಸಭೆ ಮಾಡಲಾಯಿತು. ಈ ವೇಳೆ ಮಳೆಗಾಲ ಆರಂಭವಾದರೂ ಗ್ರಾಮಾಂತರ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಆರಂಭಿಸದ, ಹಿನ್ನೆಲೆಯಲ್ಲಿ ಅಧಿಕಾರಿಗಳ (Officers) ನಿರ್ಲಕ್ಷ್ಯಕ್ಕೆ ಗ್ರಾಮಾಂತರ ಶಾಸಕ (Rural MLA) ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಡ ರಾತ್ರಿ (late night) ಹೃದಯಾಘಾತ (Heart attack)ಹಿನ್ನೆಲೆ ವಿಜಯ ಪಾಲಿ ಕ್ಲಿನಿಕ್ (Vijaya pali clinic) ಆಸ್ಪತ್ರೆಗೆ ಆಗಮಿಸಿದ್ದ ರೋಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದರಿಂದ ಅಸಮಾಧಾನ ಗೊಂಡ ರೋಗಿ ಕಡೆಯವರು ಸಿಬ್ಬಂದಿಗಳ ಮೇಲೆ ಹಲ್ಲೆ (Attack) ಮಾಡಿದ ಘಟನೆ ನಡೆದಿದೆ.
ಇಂದಿರಾಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ, ತುರ್ತು ಪರಿಸ್ಥಿತಿ ಹೇರುವ ಮೂಲಕ ಭಾರತ ಸಂವಿಧಾನವನ್ನ ಬುಡಮೇಲು ಮಾಡಿದ್ದಾರೆ, ಎಂದು ಅಸಮಾಧಾನ ವ್ಯಕ್ತಪಡಿಸಿ ಇಂದು ಸಿಂಧನೂರು ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ತಾಲೂಕು ಘಟಕದಿಂದ ಪ್ರತಿಭಟನೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು.
ಬಡವರಿಗೆ ಹಂಚಿಕೆ ಮಾಡಬೇಕಾದ ಪಡಿತರ ಆಹಾರ ಧಾನ್ಯಗಳನ್ನು, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಸಿರವಾರ ತಾಲೂಕಿನ ಮಾಚನೂರು ಗ್ರಾಮದ ನಿವಾಸಿಗಳು, ಇಂದು ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿ, ಕೂಡಲೇ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಜೂನ್ 27 ರಂದು ರಾಯಚೂರು ನಗರದ ಪಂಡಿತ್ ಜಂಬಲದಿನ್ನಿ ಸಿದ್ದರಾಮಯ್ಯ ಮಂದಿರದಲ್ಲಿ, ರಂಗಸರಿ ಸಾಂಸ್ಕೃತಿಕ ಕಲಾ ಬಳಗದ ವತಿಯಿಂದ, ಸಿ ಜಿ ಕೆ ಬೀದಿ ರಂಗದಿನ ಮತ್ತು ಸಿಜಿಕೆ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಅಧ್ಯಕ್ಷ ರಂಗಸ್ವಾಮಿ ಹೇಳಿದರು.