K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..

K 2 Kannada News
K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..
WhatsApp Group Join Now
Telegram Group Join Now

K2kannadanews.in

Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆದ ಸುದ್ದಿಗಳ ರೌಂಡ ಅಪ್ (Round Up) ನಿಮ್ಮ k2 ಎಕ್ಸ್‌ಪ್ರೆಸ್‌ ನಲ್ಲಿ ವೀಕ್ಷಿಸಿ..

ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ, ರಾಯಚೂರು ಸಿಟಿ ಫೋಟೋಗ್ರಾಫರ್ಸ್ ವಿಡಿಯೋಗ್ರಾಫರ್ಸ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ 185ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು..

ರಾಯಚೂರು ನಗರದ ಹರಿಜನವಾಡದಲ್ಲಿ 50,000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗಾಗಿ ಈ ಒಂದು ಬಡಾವಣೆಯಲ್ಲಿ, ಒಂದು ಪೊಲೀಸ್ ಠಾಣೆ , ಆಸ್ಪತ್ರೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕು ಎಂದು ಪತ್ರಿಕಾಗೋಷ್ಠಿ ಮೂಲಕ ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಯಿತು.

ರಾಯಚೂರಿನಲ್ಲಿ ದರ್ವೇಶ್ ಟ್ರೇಡಿಂಗ್ ಕಂಪನಿಯ ಬಹುಕೋಟಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ, 2 ತಿಂಗಳು ಕಳೆದರೂ ಮಾಲೀಕ ಮಹಮ್ಮದ್ ಸುಜನನ್ನು ಅರೆಸ್ಟ್ ಮಾಡಿಲ್ಲ. ಕೂಡಲೆ ಸುಜನನ್ನು ಬಂಧಿಸದೆ ಹೋದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.

ರಾಯಚೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಇಂದು ರೈತ ಸಂಘಟನೆ ವತಿಯಿಂದ, ಸರ್ಕಾರ ವಿದ್ಯುತ್ ಕಾಯ್ದೆ ಅಡಿಯಲ್ಲಿ ಪಂಪ್ಸೆಟ್ ಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಮುಖಾಂತರ ಮೀಟರ್ ಅಳವಡಿಕೆಗೆ ಮುಂದಾಗಿದ್ದು, ಈ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಿದರು.

 

WhatsApp Group Join Now
Telegram Group Join Now
Share This Article