K2kannadanews.in
Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ (Round Up) ನಿಮ್ಮ k2 ಎಕ್ಸ್‌ಪ್ರೆಸ್ ನಲ್ಲಿ ವೀಕ್ಷಿಸಿ..
ಜಮಅತೆ ಇಸ್ಲಾಮೀ ಹಿಂದ್ ಆಶ್ರಯದಲ್ಲಿ ನೈತಿಕತೆಯೇ ಸ್ವಾತಂತ್ಯ ಎಂಬ ಘೋಷವಾಕ್ಯ ಸೆಪ್ಟೆಂಬರ ಒಂದು ತಿಂಗಳ ವರೆಗೆ ರಾಷ್ಟ್ರವ್ಯಾಪ್ತಿ ಅಭಿಯಾನ ವ್ಯಾಪಕ ಪ್ರಚಾರ ನಡೆಯಲಿದೆ ಎಂದು ರಾಜ್ಯ ಸಂಚಾಲಕಿ ಸಾಲಿಹಾ ನೂರೈನ್ ಅವರು ಹೇಳಿದರು.
ಪಿಂಜಾರ – ನದಾಫ್ ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ ಸ್ಥಾಪಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಪಿಂಜಾರ ನದಾಫ್ ಮನ್ಸೂರಿ ಹಕ್ಕುಗಳ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಜಿಲ್ಲಾ ಸವಿತಾ ಸಮಾಜ ನೌಕರರ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ 9ನೇ ಪ್ರತಿಭಾ ಪುರಸ್ಕಾರ ಸಮಾರಂಭದ ಕಾರ್ಯಕ್ರಮ ಸೆ.1ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಆರ್ ನಾಗರಾಜ ಹೇಳಿದರು.
ನಗರದ ಸತ್ಯನಾಥ ಕಾಲೋನಿ ವಾರ್ಡ ನಂ 13 ರಲ್ಲಿ ಕೈಗೊಂಡ ಬಿ.ಟಿ. ಡಾಂಬರೀಕರಣ ರಸ್ತೆ ತೀರಾ ಕಳಪೆ ಮಟ್ಟದಿಂದ ಕೂಡಿದ್ದು ಬಿಲ್ ತಡೆ ಹಿಡಿದು ಜೆ.ಇ ಮತ್ತು ಎಇಇ ಹಾಗೂ ಇಇ ಮುಂಬಡ್ತಿ ತಡೆ ಹಿಡಿಯಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಡಾ. ಬಿ ಆರ್ ಅಂಬೇಡ್ಕರ್ ಸೇನ್ಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಜಿಲ್ಲೆ ಸೇರಿ ರಾಜ್ಯದಲ್ಲಿ ಅಂಗವಿ ಕಲರು ಅನೇಕ ಸಮಸ್ಯೆಗಳು ಎದುರು ಸುತ್ತಿದ್ದಾರೆ ಅಂಗವಿಕಲರು ಸಮಾಜ ದಲ್ಲಿ ಘನತೆಯಿಂದ ಜೀವನ ನಿರ್ವ ಹಣೆ ಪ್ರತಿ ತಿಂಗಳು ಕನಿಷ್ಠ 10 ಸಾವಿರ ಜೀವನ ಭತ್ಯೆಗೆ ಕೇಂದ್ರ ಮತ್ತು ರಾಜ್ಯ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗವಿಕಲ ಹಾಗೂ ಪಾಲಕರ ಒಕ್ಕೂಟದಿಂದ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.
ಹಾಕಿ ಮಾಂತ್ರಿಕ ಧ್ಯಾನಚಂದ್ 119ನೇ ಹುಟ್ಟು ಹಬ್ಬದ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಹಾಕಿ ರಾಯಚೂರು, ಹಾಕಿ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ 5 ಕ್ರೀಡಾ ಪಟುಗಳ ಹಾಕಿ ಪಂದ್ಯಾವಳಿಗಳು ಹೊನಲು ಬೆಳಕಿನ ಅಡಿಯಲ್ಲಿ ಇಂದು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಬಾಸ್ಕೆಟ್ ಬಾಲ್ ಕೋರ್ಟ್ ನಲ್ಲಿ ನಡೆಯಿತತು.