K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..

K 2 Kannada News
K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..
WhatsApp Group Join Now
Telegram Group Join Now

K2kannadanews.in

Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ ನಿಮ್ಮ k2 ಎಕ್ಸ್‌ಪ್ರೆಸ್‌ ನಲ್ಲಿ ವೀಕ್ಷಿಸಿ.

ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರಿಗೆ ಕಳೆದ 9 ತಿಂಗಳ ವೇತನ ನೀಡಿಲ್ಲ ಇದರಿಂದ ಸಂಸಾರ ಸರತಿಗಿಸುವುದು ಸಮಸ್ಯೆಯಾಗುತ್ತಿದೆ ಮಕ್ಕಳ ಫೀಸ್ ಕಟ್ಟುವುದು ಸಮಸ್ಯೆಯಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೂಡ ವೇತನ ಸರಿಯಾಗಿದೆ ರಾಯಚೂರು ಜಿಲ್ಲೆಯಲ್ಲಿ ಮಾತ್ರ ಸಿಬ್ಬಂದಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ವೇತನ ಇಎಸ್ಐ, ಪಿಎಫ್ ನೀಡಲು ಆಗ್ರಹಿಸಿ 15 ದಿನಗಳು ಕಾಲಾವಕಾಶ ನೀಡಿದ ವಾಗಿದೆ ಒಂದು ವೇಳೆ ವೇತನ ನೀಡದಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗುವ ಎಚ್ಚರಿಕೆ ನೀಡಿದ್ದಾರೆ.

ಕಪಗಲ್ ಗ್ರಾಮದಲ್ಲಿ ಬಸ್ ನಿಲ್ಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಂದ ರಸ್ತೆ ತಡೆಸು ಪ್ರತಿಭಟನೆ ಮಾಡಲಾಯಿತು. ಹಲವು ದಿನಗಳಿಂದ ನಾನ್ ಸ್ಟಾಕ್ ಬಸ್ಗಳು ಸೇರಿ, ವೇಗದೂತ ಬಸ್ಸುಗಳು ಗ್ರಾಮದಲ್ಲಿ ನಿಲುಗಡೆ ಮಾಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಾಕಷ್ಟು ಸಮಸ್ಯೆ ಆಗುತ್ತಿದೆ, ಎಂದು ಅಸಮಾಧಾನ ವ್ಯಕ್ತಪಡಿಸಿ ಏಕಾಏಕಿ ವಿದ್ಯಾರ್ಥಿಗಳು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ.

ಇಂದಿರಾಗಾಂಧಿಯವರು ಹಿಂದೆ ಪ್ರಧಾನಿಯಾಗಿದ್ದಾಗ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನ ಹೇರಿದ್ದರು. ಈ ವೇಳೆ ಸಂವಿಧಾನ ದುರ್ಬಳಕೆ ಮಾಡಲಾಗಿದೆ ಎಂದು ವಿರೋಧಿಸಿ, ಪೋಸ್ಟರ್ ಚಳುವಳಿಯನ್ನು ಬಿಜೆಪಿ ಯುವ ಘಟಕದಿಂದ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆ ವೇಳೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರು ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯ ಮಾಡಲಾಯಿತು.

ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗ ಯುವಕರಿಗೆ ಮೀಸಲಾತಿ ಸಿಗಬೇಕು ಎನ್ನುವುದಾದರೆ. ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.

ರಾಯಚೂರು ತಾಲೂಕಿನ ವಡ್ಡೆಪಲ್ಲಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಶಿಕ್ಷಕರನ್ನು ನೇಮಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮನವಿ ಪತ್ರ ಸಾಧಿಸಲಾಯಿತು. ಗ್ರಾಮದಲ್ಲಿರುವ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 220 ವಿಧ್ಯಾರ್ಥಿಗಳಿದ್ದು ಕೇವಲ 5 ಶಿಕ್ಷಕರಿದ್ದಾರೆ. ಮುಖ್ಯವಾಗಿ ಹಿಂದಿ, ವಿಜ್ಞಾನ ಮತ್ತು ದೈಹಿಕ ಶಿಕ್ಷಕರಿಲ್ಲ. ಇವರನ್ನ ಕೂಡಲೇ ನೇಮಿಸಬೇಕು ಎಂದು ಒತ್ತಾಯಿಸಿದರು..

WhatsApp Group Join Now
Telegram Group Join Now
Share This Article