K2kannadanews.in
Huge crocodile ರಾಯಚೂರು : ಕಳೆದ ಎರಡು ಮೂರು ದಿನಗಳ (2-3 days) ಹಿಂದೆ ಗಂಜಳ್ಳಿ ಗ್ರಾಮದ (Village) ಹುಸೇನಪ್ಪಾ ದರ್ಗಾದ (Darga) ಬಳಿ ಇರುವ ಚಿಕ್ಕ ಕೆರೆಯಲ್ಲಿ (Small lake) ಬೃಹತ ಮಸಳು ಎಂದು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದ ಮೊಸಳೆಯನ್ನ ಸೆರೆ ಹಿಡಿದ ಘಟನೆ ನಡೆದಿದೆ.
ರಾಯಚೂರು ತಾಲೂಕಿನ ಗಂಜಳ್ಳಿ ಗ್ರಾಮದಲ್ಲಿ ಮೊಸಳೆ ಪ್ರತ್ಯಕ್ಷ ವಾಗಿ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿತ್ತು. ಕಳೆದ ಎರಡು ಮೂರು ದಿನಗಳಿಂದ ಪ್ರತ್ಯಕ್ಷವಾಗಿತ್ತು. ಮೊಸಳೆ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರು ಮತ್ತು ಮೀನುಗಾರರ ಸಹಾಯದಿಂದ ಮೊಸಳೆಯನ್ನ ಸೆರೆಹಿಡಿದು ಕೃಷ್ಣಾ ನದಿಗೆ ಬಿಟ್ಟಿದ್ದಾರೆ.
ಕೃಷ್ಣಾ ನದಿ ಪ್ರವಾಹದಲ್ಲಿ ಬಂದ ಮೊಸಳೆ ಕೆರೆ ಸೇರಿರಬಹುದು ಅಥವಾ ಆಹಾರ ಅರಸಿಬಂದಿರಬಹುದು ಎಂದು ಶಂಕಿಸಲಾಗಿದೆ. ಈ ಒಂದು ಸಣ್ಣ ಕೆರೆಯಲ್ಲಿ ಎರಡು ಮೊಸಳೆಗಳನ್ನ ಗ್ರಾಮಸ್ಥರು ನೋಡಿದ್ದಾರೆ. ಎರಡು ಮೊಸಳೆಗಳಲ್ಲಿ ಬೃಹತ್ ಮೊಸಳೆ ಎಂದನ್ನ ಸೆರೆಹಿಡಿದಿದ್ದು, ಇದರಿಂದ ಗ್ರಾಮಸ್ಥರು ಕೊಂಚ ನಿಟ್ಟಿಸಿರು ಬಿಟ್ಟಿದ್ದಾರೆ ಇರುವ ಇನ್ನೊಂದು ಮೊಸಳೆಯನ್ನು ಕೂಡ ಆದಷ್ಟು ಬೇಗ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.