K2kannadanews.in
Alluarjun ಹೈದ್ರಾಬಾದ್ : ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆ ಪ್ರಕರಣ ಸಂಬಂಧ ಪುಷ್ಪಾ 2 ಖ್ಯಾತಿಯ ಸ್ಟಾರ್ ಹೀರೋ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 04 ರಂದು ರಾತ್ರಿ ಅಲ್ಲು ಅರ್ಜುನ್, ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ, ಗಲಾಟೆಯಾಗಿ ಕಾಲ್ತುಳಿತದಲ್ಲಿ ರೇವತಿ ಹೆಸರಿನ ಮಹಿಳೆ ನಿಧನ ಹೊಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅನ್ನು ಇಂದು ಬೆಳಿಗ್ಗೆ ಹೈದರಾಬಾದ್ನ ಚೀಕಡಪಲ್ಲಿ ಪೊಲೀಸರು ಅವರ ಮನೆಯಿಂದ ಬಂಧಿಸಿ ಕರೆದೊಯ್ದಿದ್ದಾರೆ. ಅಲ್ಲು ಅರ್ಜುನ್ ಅವರನ್ನು ಪೊಲೀಸರು ಕರೆದೊಯ್ದ ವಿಡಿಯೋ ಇಲ್ಲಿದೆ.