K2kannadanews.in
Crime News ರಾಯಚೂರು : ಮನೆಯಲ್ಲಿ ಮಾಲಿಕರು ಇಲ್ಲದ್ದನ್ನು ಗಮನಿಸಿದ ಕಳ್ಳರ ಗ್ಯಾಂಗ್ ಒಂದು ಮನೆ ಬಾಗಿಲು ಮುರಿದ ಒಳನುಗ್ಗಿ ಕಳ್ಳತನ ಮಾಡಿದ ಘಟನೆ ನಡೆದಿದೆ. ಕಳೆದನಕ್ಕೂ ಮುಂಚೆ ಮನೆ ಒಳಗೆ ಕಳ್ಳರು ಹೋಗುವ ಮತ್ತು ಹೊರಗೆ ಹೋಗುವ ವಿಡಿಯೋ ಸೆರೆಯಾಗಿದೆ.
ರಾಯಚೂರು ನಗರದ ಕೃಷ್ಣಗಿರಿ ಹಿಲ್ಸ್ ನ ಒಳಗೆ ಇರುವಂತಹ ವಿಲಾಸಿ ಬಂಗಲೆ ಇರುವಂತಹ ಸ್ಥಳದಲ್ಲಿ ಈ ಒಂದು ಘಟನೆ ಜರುಗಿದೆ. ಶ್ರೀನಿವಾಸ ರಾವ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮಧ್ಯರಾತ್ರಿ ವೇಳೆ ಕಳ್ಳರು ಮನೆಯ ಒಳಗೆ ಹೋಗುವ ಮತ್ತು ಮನೆಯಿಂದ ಹೊರಗೆ ಹೋಗುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದೆ. ವಿಡಿಯೋದಲ್ಲಿ ಕಾಣುವಂತೆ ನಾಲ್ಕು ಜನರ ತಂಡ ಕಳ್ಳತನಕ್ಕೆ ಮನೆಯೊಳಗೆ ಹೋಗಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಮನೆಯಿಂದ ಹೊರಗೆ ಬಂದಿರುವ ವಿಡಿಯೋ ಸರಿಯಾಗಿದೆ.
ಮನೆಯ ಮುಖ್ಯ ದ್ವಾರ ಒಡೆದು ಹಾಕಿ ಒಳಗೆ ನುಗ್ಗಿದ ಕಳ್ಳರು ಮನೆಯೊಳಗಿನ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ ಮನೆಯೊಳಗಿನ ಅಲಮಾರಿ ಸೇರಿದಂತೆ ಬೇರೆ ಬೇರೆ ಕೊಠಡಿಗಳಲ್ಲಿ ಹುಡುಕಾಟ ಮಾಡಿದ್ದಾರೆ ಈ ವೇಳೆ ಮನೆಯಲ್ಲಿದ್ದ ಸಾಮಗ್ರಿಗಳನ್ನ ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದಾರೆ. ಏನೋ ಮಾಹಿತಿ ತಿಳಿದೊ ಸ್ಥಳಕ್ಕೆ ಆಗಮಿಸಿದ ವೆಸ್ಟ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳೀಯರಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.