K2kannadanews.in
Vande Bharat Express ಯಾದಗಿರಿ : ಕಲಬುರ್ಗಿ ರಾಯಚೂರು ಬೆಂಗಳೂರು ಮತ್ತೆ ಓಡಾಡುತ್ತಿರುವ ಒಂದೇ ಭಾರತ ಎಕ್ಸ್ ಪ್ರೆಸ್ ರೈಲು ಯಾದಗಿರಿ ನಿಲುಗಡೆಯನ್ನ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕರು ಪತ್ರದ ಮೂಲಕ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಹೌದು ದಕ್ಷಿಣ ಕೇಂದ್ರ ರೈಲ್ವೇಯು ಯಾದಗಿರಿ (YG) ನಿಲ್ದಾಣದಲ್ಲಿ ರೈಲು ಸಂಖ್ಯೆ.22232/22231 SMVB-KLBG-SMVB ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಮುಂದಿನ ಸಲಹೆಯವರೆಗೂ ನಿಲುಗಡೆ ರದ್ದುಗೊಳಿಸಬಹುದು ಎಂದು ಪತ್ರದ ಮೂಲಕ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ವಂದೇ ಭಾರತ ರೈಲು ಆರಂಭವಾದಾಗಿನಿಂದಲೂ ಕೂಡ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು ಎಂಬುದು ಇಲ್ಲಿನ ಜನರ ಒತ್ತಾಯವಾಗಿತ್ತು.
ಇದೀಗ ರೈಲ್ವೆ ಅಧಿಕಾರಿಗಳು ಸ್ಪಷ್ಟವಾಗಿ ಪತ್ರ ಬರೆದಿದ್ದು, ಮುಂದಿನ ದಿನಗಳಲ್ಲಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ನಿಲುಗಡೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವವರೆಗೂ, ಈ ಒಂದು ಆದೇಶ ಮುಂದುವರಿಯುತ್ತದೆ ಎಂಬ ಮಾತನ್ನು ಹೇಳಿರುವಂತದ್ದು ಯಾದಗಿರಿ ಜನರಿಗೆ ನಿರಾಸೆ ಉಂಟು ಮಾಡಿದೆ. ಆದರೆ ಈ ಒಂದು ಪತ್ರ ಅಧಿಕಾರಿಗಳು ನಿಜವಾಗಲೂ ಬರೆದಿದ್ದಾರೆಯೇ ಎಂಬ ಮಾಹಿತಿ ತಿಳಿಯಬೇಕಿದೆ.