This is the title of the web page
This is the title of the web page
Local News

ವಚನಗಳು ವೈಚಾರಿಕತೆ ಕೂಡಿದೆ : ಡಾ. ಸುಮಂಗಲ


ರಾಯಚೂರು : ವಚನಗಳೆಲ್ಲವೂ ಕೂಡ ವೈಚಾರಿಕತೆಯಿಂದ ಕೂಡಿದೆ ವಚನಗಳಲ್ಲಿ ವೈಜ್ಞಾನಿಕತೆ ಸೇರಿಸಬೇಕು ಪ್ರತಿಯೊಂದು ವಚನ ವಿಜ್ಞಾನ, ತತ್ವಜ್ಞಾನ ಹೊಂದಿದೆ ಎಂದು ಕನ್ನಡ ಉಪನ್ಯಾಸಕರಾದ ಡಾ.ಸುಮಂಗಲ ಅವರು ಹೇಳಿದರು.

ರಾಯಚೂರು ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ ಇಂದು ಕದಳಿ ವೇದಿಕೆ ಶರಣ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕ, ಮತ್ತು ಮಹಿಳಾ ಕಾಲೇಜಿನ ಸಹಯೋಗದಲ್ಲಿ ವಚನ ಸಾಹಿತ್ಯದಲ್ಲಿ ವೈಚಾರಿಕತೆ ವಿಷಯದ ಮೇಲೆ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಾತನಾಡಿದ ಉಪನ್ಯಾಸಕರಾದ ಡಾ.ಸುಮಂಗಲ ಅವರು ವಚನಗಳಲ್ಲಿ ವೈಜ್ಞಾನಿಕತೆಯನ್ನು ನಾವು ಸೇರಿಸಬೇಕು ಮೊದಲಿಗೆ ಮೌಢ್ಯತೆಯನ್ನು ಹೋಗಲಾಡಿಸಿದ್ದು 12ನೇ ಶತಮಾನದಲ್ಲಿ, ಆಗ ನಮ್ಮಲ್ಲಿ ಮೌಢ್ಯತೆ, ಡಾಂಬಿಕತೆ ಇತ್ತು ಇದನ್ನ ಹೋಗಲಾಡಿಸಿದ್ದು 12ನೇ ಶತಮಾನದ ವಚನ ಸಾಹಿತ್ಯ. ಹಾಗಾಗಿ ಬದುಕು ಎನ್ನುವುದು ಸುಂದರವಾದದ್ದು ಅದನ್ನು ನಾವು ಕಠಿಣವಾಗಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ವಚನ ಸಾಹಿತ್ಯದಲ್ಲಿ ಇಂದಿನ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರಸನ್ನಕುಮಾರ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕದಳಿ ವೇದಿಕೆ ಅಧ್ಯಕ್ಷರಾದ ಲಲಿತಾ ಎಂ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಸ್ಕಿ ನಾಗರಾಜ್, ಕಾಲೇಜಿನ ಐಕ್ಯೂ ಎಸಿ ಸಂಯೋಜಕರಾದ ಡಾ.ಜ್ಯೋತಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಮಲ್ಲಯ್ಯ ಗೌರವ ಉಪಸ್ಥಿತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಾನಮ್ಮ ಸುಭಾಷ್ ಚಂದ್ರು, ಡಾ. ಸರ್ವಮಂಗಳ ಸಕ್ರಿ ಸೇರಿದಂತೆ ಹಲವು ಗಣ್ಯರು ಮತ್ತು ಕಾಲೇಜು ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು.


[ays_poll id=3]