
K2 ಹೆಲ್ತ್ ಟಿಪ್ : ಪ್ರಸ್ತುತ ಆಹಾರ ಪದ್ಧತಿಯಲ್ಲಿ ಏರುಪೇರಾಗಿ ಅಸಿಟಿಡಿ ಸಮಸ್ಯೆ ಕಾಣಿಸಿಕೊಂಡಾಗ ಕೆಲವರು ಮಾತ್ರೆ ನುಂಗುತ್ತಾರೆ. ಅಂಟಾಸಿಡ್ ಅಂಶ ಇರುವ ಪಾನೀಯಗಳನ್ನು ಸೇವಿಸುವುದೂ ಮಾಡುತ್ತಾರೆ. ಈ ಸಮಸ್ಯೆಗೆ ಮನೆಯಲ್ಲೇ ಇರುವ ಕೆಲವು ಪದಾರ್ಥಗಳಿಂದ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲವು ಆಹಾರ ಪದಾರ್ಥಗಳ ಬಗ್ಗೆ ವಿವರ ಇಲ್ಲಿದೆ.
ತಣ್ಣನೆಯ ಹಾಲು : ತಣ್ಣನೆಯ ಹಾಲು ಕುಡಿಯುವುದರಿಂದ ತಕ್ಷಣಕ್ಕೆ ಆಸಿಡಿಟಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿದ್ದು, ದೇಹದಲ್ಲಿನ ಆಮ್ಲೀಯ ಅಂಶವನ್ನು ಹೀರಿಕೊಂಡು ಅಸಿಡಿಟಿಯನ್ನು ನಿಯಂತ್ರಿಸುತ್ತದೆ. ಅಲ್ಲದೆ ತಕ್ಷಣವೇ ನೋವು ಹಾಗೂ ಅಸ್ವಸ್ಥತೆಯನ್ನು ನಿವಾರಿಸುತ್ತದೆ ಎನ್ನುತ್ತಾರೆ ತಜ್ಞರು.
ಕ್ಯಾಮೋಮಾಯಿಲ್ ಟೀ : ಸೌಮ್ಯವಾದ ಹೂವಿನಿಂದ ತಯಾರಿಸುವ ಕ್ಯಾಮೋಮಾಯಿಲ್ ಟೀ ಉತ್ಕರ್ಷಣ ವಿರೋಧಿಯಾಗಿದೆ. ಇದು ಆಸಿಡ್ ರಿಫ್ಲಕ್ಸ್ ಅನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಅಲ್ಲದೇ ಆಸಿಡಿಟಿ ಕಾಣಿಸಿಕೊಳ್ಳುವ ತೀವ್ರವಾದ ನೋವಿಗೂ ಇದರಿಂದ ತಕ್ಷಣಕ್ಕೆ ಪರಿಹಾರ ಪಡೆಯಬಹುದು.
ಮಾಗಿದ ಬಾಳೆಹಣ್ಣು : ಪೊಟ್ಯಾಶಿಂ ಅಂಶ ಅಧಿಕವಾಗಿರುವ ಮಾಗಿದ ಬಾಳೆಹಣ್ಣಿನ ಸೇವನೆಯಿಂದ ಆಸಿಡಿಟಿ ಸಮಸ್ಯೆಗೆ ತಕ್ಷಣಕ್ಕೆ ಪರಿಹಾರ ದೊರೆಯುತ್ತದೆ. ಇದು ದೇಹವನ್ನು ಸೇರಿದ ತಕ್ಷಣ ಆಮ್ಲೀಯತೆ ಪ್ರಚೋದಕಗಳನ್ನು ನಿಯಂತ್ರಿಸುತ್ತದೆ. ಇದು ಕ್ಲಾರೀಯ ಗುಣವನ್ನು ಹೊಂದಿದ್ದು, ಎದೆಯುರಿಯನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ತುಳಸಿ ಎಲೆ : ತುಳಸಿ ಎಲೆಯಲ್ಲಿ ಹಲವು ಬಗೆಯ ಆರೋಗ್ಯ ಗುಣಗಳಿದ್ದು, ಇದು ಆಸಿಡ್ ರಿಫ್ಲಕ್ಸ್ ಅನ್ನು ತಕ್ಷಣಕ್ಕೆ ನಿಯಂತ್ರಿಸಿ ಗ್ಯಾಸ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೇ ಉಬ್ಬಿದಂತಿರುವ ಎದೆ, ಹೊಟ್ಟೆಯ ನೋವನ್ನೂ ನಿಯಂತ್ರಿಸುತ್ತದೆ. ತುಳಸಿಯಲ್ಲಿ ಹುಣ್ಣು ವಿರೋಧ ಗುಣವಿದ್ದು, ಪ್ರತಿದಿನ ಚಹಾ ಅಥವಾ ಬಿಸಿನೀರಿನೊಂದಿಗೆ ತುಳಸಿ ಎಲೆಯನ್ನು ಹಾಕಿ ಕುದಿಸಿ ಕುಡಿಯಬೇಕು. ಇದು ಹೊಟ್ಟೆಯಲ್ಲಿ ಆಮ್ಲೀಯ ಮಟ್ಟ ಕಡಿಮೆಯಾಗುವಂತೆ ಮಾಡುತ್ತದೆ.
ಶುಂಠಿ : ಶುಂಠಿಯಲ್ಲಿ ವಾಂತಿಕಾರಕ ಗುಣವಿದೆ. ಇದು ವಾಕರಿಕೆ ಅಥವಾ ವಾಂತಿಯ ಅನುಭವವನ್ನು ನಿಯಂತ್ರಿಸುತ್ತದೆ. ಶುಂಠಿ ಟೀ ಕುಡಿಯುವುದರಿಂದ ಉರಿಯೂತ ಕಡಿಮೆಯಾಗುತ್ತದೆ. ಅಲ್ಲದೆ ಇದು ನೋವು, ಆಸಿಡಿಟಿಯಿಂದ ಉಂಟಾಗುವ ಅಸ್ವಸ್ಥತೆಯನ್ನು ನಿವಾರಿಸುವ ಗುಣವನ್ನು ಹೊಂದಿದೆ. ಹಾಗಾಗಿ ಪ್ರತಿನಿತ್ಯ ಆಹಾರದೊಂದಿಗೆ ಶುಂಠಿಯನ್ನು ಸೇರಿಸುವುದು ಉತ್ತಮ.
![]() |
![]() |
![]() |
![]() |
![]() |
[ays_poll id=3]