ರಸ್ತೆ ಬದಿ ಮಲಗಿದ್ದವರ ಮೇಲೆ ರೋಡ್‌ ರೋಲರ್ ಹರಿದು ಇಬ್ಬರ‌ ಸಾವು..?

K 2 Kannada News
ರಸ್ತೆ ಬದಿ ಮಲಗಿದ್ದವರ ಮೇಲೆ ರೋಡ್‌ ರೋಲರ್ ಹರಿದು ಇಬ್ಬರ‌ ಸಾವು..?
Oplus_131072
WhatsApp Group Join Now
Telegram Group Join Now

K2kannadanews.in

Accident News ಹಾವೇರಿ : ದುರದೃಷ್ಟ ಅಂದ್ರೆ ಇದೆ ಅನ್ಸುತ್ತೆ. ಊಟ ಮಾಡಿ ರಸ್ತೆಯ ಪಕ್ಕ ವಿಶ್ರಾಂತಿ ಪಡೆಯುತ್ತಿದ್ದ ದಿನಗೂಲಿ ಕೆಲಸವರ ಮೇಲೆ, ರೋಡ್‌ ರೋಲರ್‌ ಹರಿದು ಇಬ್ಬರು ಭೀಕರವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮೋಟೆಬೆನ್ನೂರಿನಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನಲ್ಲಿ ಘಟನೆ ನಡೆದಿದದ್ದು, ಮೃತರನ್ನು ಸಿದ್ದು (24) ಹಾಗೂ ಪ್ರೀತಮ್‌ (25) ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿ ಕೆಲಸಕ್ಕಾಗಿ ಆಗಮಿಸಿದ ಇಬ್ಬರು, ಶನಿವಾರ ಮಧ್ಯಾಹ್ನ ಊಟ ಮಾಡಿ ರೋಡ್‌ ರೋಲರ್‌ ಪಕ್ಕದಲ್ಲಿಯೇ ಮಲಗಿದ್ದರು.

ಈ ವೇಳೆ ದುರ್ಘಟನೆ ಸಂಭವಿಸಿದೆ. ಘಟನೆಯ ಬಳಿಕ ಸ್ಥಳಕ್ಕೆ ಬ್ಯಾಡಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲೇ ಶವವಿಟ್ಟು ಕುಟುಂಬಸ್ಥರು, ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿಯೇ ಪರಿಹಾರ ಘೋಷಣೆ ಮಾಡಲು ಒತ್ತಾಯಿಸಿದ್ದಾರೆ.

WhatsApp Group Join Now
Telegram Group Join Now
Share This Article