K2kannadanews.in
Crime News ರಾಯಚೂರು : ಕೆಲಸ ಮುಗಿಸಿಕೊಂಡು ಒಂದೇ ಬೈಕ್ ನಲ್ಲಿ ನಾಲ್ಕು ಜನ ಮನೆಗೆ ತೆರಳುತ್ತಿದ್ದ ವೇಳೆ, ಬೈಕಿಗೆ ಕಾರು ಡಿಕ್ಕಿ ಹೊಡೆದು, ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪವರ್ ಗ್ರಿಡ್ ಬಳಿ ನಡೆದಿದೆ.
ರಾಯಚೂರು ನಗರದ ಹೊರವಲಯದ ಪವರ್ ಗ್ರಿಡ್ ಬಳಿ ಅಪಘಾತ ಜರುಗಿದೆ. ಶರಣಬಸವ (28), ಶಿವು(26) ಸ್ಥಳದಲ್ಲೇ ಮೃತಪಟ್ಟ ಸವಾರರು. ಇಫಾನ್ ಮತ್ತು ಗರೀಬ್ ಎಂಬ ಇಬ್ಬರು ಯುವಕರು ಗಾಯಗೊಂಡಿದ್ದಾರೆ. ರಾಯಚೂರಿನಿಂದ ಕಲ್ಲೂರಿಗೆ ಒಂದೇ ಬೈಕನಲ್ಲಿ ಹೊರಟಿದ್ದ ನಾಲ್ವರು ಹೊರಟಿದ್ದರು, ಈ ವೇಳೆ ಪವರ್ ಗ್ರಿಡ್ ಬಳಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಹೋಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಕೆಳಗಿ ಬಿದ್ದಿದ್ದಾರೆ. ಇದೇ ಸಮಯಕ್ಕೆ ಹಿಂದೆ ಲಾರಿಯೊಂದು ವೇಗದಲ್ಲಿ ಚಲಿಸುತ್ತಿದ್ದ ಕಾರಣ ಇಬ್ಬರ ಮೇಲೆ ಲಾರಿ ಹರಿದಿದೆ ಎನ್ನಲಾಗುತ್ತಿದ್ದು, ಆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ಬೈಕ್ ಸವಾರರು ಸಿರವಾರ ತಾಲೂಕಿನ ಕಲ್ಲೂರು ನಿವಾಸಿಗಳು ಎಂದು ಗುರುತಿಸಲಾಗಿದೆ. ಪ್ರಸ್ತುತ ಘಟನೆ ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.