ರಾಯಚೂರು : ಭೀಕರ ರಸ್ತೆ ಅಪಘಾತ, ಹಿರಿಯ  ವರದಿಗಾರ ಸೇರಿ ಇಬ್ಬರು ಸಾವು..

K 2 Kannada News
ರಾಯಚೂರು : ಭೀಕರ ರಸ್ತೆ ಅಪಘಾತ, ಹಿರಿಯ  ವರದಿಗಾರ ಸೇರಿ ಇಬ್ಬರು ಸಾವು..
WhatsApp Group Join Now
Telegram Group Join Now

K2kannadanews.in

Accident News ರಾಯಚೂರು : ಕಾರು (Car) ಮತ್ತು ಟಿಪ್ಪರ್​ (Tipper) ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಯಚೂರು ಮೂಲದ ಇಬ್ಬರು ಮೃತಪಟ್ಟಿರುವ ಘಟನೆ ತೆಲಂಗಾಣದ ಮಹಿಬೂಬ್​ ನಗರ ಜಿಲ್ಲೆಯಲ್ಲಿ ನಡೆದಿದೆ.

ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆ ಅಲೇರು ಮಂಡಲದ ಕೊಲನುಪಾಕ ಗ್ರಾಮದ, ಚಂಡಿಕಾಂಬ ಸಮೇತ ಸ್ವಯಂಭೂ ಸೋಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ವೇಳೆ‌ ಕಾರು ಹಾಗೂ ಟಿಪ್ಪರ್‌ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಲಿಂಗಸುಗೂರು ಮೂಲದ ಹಿರಿಯ ಪತ್ರಕರ್ತ ಬಸವರಾಜ್ ನಂದಿಕೋಲಮಠ (56), ಜಂಗಮ ಮೂರ್ತಿ(55) ಎಂದು ಗುರುತಿಸಲಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ಪುರಸಭೆ ಮಾಜಿ ಅಧ್ಯಕ್ಷ ಮಲ್ಲಣ್ಣ ವಾರದ, ಚೆನ್ನಯ್ಯ ಕಾಳಸಿಮಠ ಅವರನ್ನು ಹೈದರಾಬಾದ್‌ನ ಆಸ್ಪತ್ರೆ ಹಾಗೂ ಅಮರೇಶ, ಭಗವಾನ ಅವರನ್ನು ಮೆಹಬೂಬನಗರದ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು ಇದರಲ್ಲೂ ಕೂಡ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿ.ಎ.ನಂದಿಕೋಲಮಠ ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಲಿಂಗಸುಗೂರು ಪಟ್ಟಣದಲ್ಲಿ ಬುಧವಾರ (ಜ.8) ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

WhatsApp Group Join Now
Telegram Group Join Now
Share This Article