
ರಾಯಚೂರು: ಗ್ರಾಮ ಪಂಚಾಯಿತಿಯಿಂದ ತೋಡಿ ಬಿಟ್ಟ ಗುಂಡಿಯಲ್ಲಿ ಬಿದ್ದು ಇಬ್ಬರು ಬಾಲಕರು ದುರ್ಮರಣಕ್ಕೀಡಾದ ಘಟನೆ ಬ್ಯಾಗವಾಟ ಗ್ರಾಮದಲ್ಲಿ ಹೃದಯವಿದ್ರವಕ ಘಟನೆ ಜರುಗಿದೆ.
ರಾಯಚೂರಿನ ಮಾನ್ವಿ ತಾಲ್ಲೂಕಿನ ಬ್ಯಾಗವಾಟ ಗ್ರಾಮದಲ್ಲಿ ಘಟನೆ ಜರುಗಿದೆ. ಅಜಯ್(8) ಹಾಗೂ ಸುರೇಶ್(6) ಮೃತ ಬಾಲಕರಾಗಿದ್ದಾರೆ. ಬ್ಯಾಗವಾಟ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗ ಘಟನೆ ನಡೆದಿದೆ. ಬೆಟ್ಟದ ನೀರು ಶಾಲಾ ಮೈದಾನಕ್ಕೆ ಬಾರದಂತೆ ತಡೆಯಲು ಗುಂಡಿ ತೋಡಲಾಗಿತ್ತು. 32 ಅಡಿ ಉದ್ದ, 6 ಅಡಿ ಅಗಲ ಹಾಗೂ 8 ಅಡಿ ಆಳದ ಗುಂಡಿಯನ್ನು ನಿರ್ಮಿಸಲಾಗಿತ್ತು.

ಪಕ್ಕದಲ್ಲೇ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಹೋಗಿತ್ತು. ಹೀಗಾಗಿ ಗುಂಡಿಯಲ್ಲಿ ನೀರು ಸಂಗ್ರಹವಾಗಿತ್ತು. ರಸ್ತೆ ದಾಟುವಾಗ ಮಣ್ಣು ಜಾರಿ ಬಾಲಕರು ಗುಂಡಿಗೆ ಬಿದ್ದಿದ್ದರು. ಬಾಲಕರು ಮೇಲೆ ಬರಲಾಗದೆ ಅಲ್ಲೇ ಮುಳಗಿ ಸಾವನ್ನಪ್ಪಿದ್ದರು. ಮಕ್ಕಳು ಮನೆಗೆ ಬಾರದ ಕಾರಣ ಪಾಲಕರು ಅಲ್ಲಲ್ಲಿ ಹುಡುಕಾಟ ನಡೆಸಿದ್ದರು. ರಾತ್ರಿ ವೇಳೆ ನೀರಿನಲ್ಲಿ ಬಿದ್ದಿರಬಹುದೆಂದು ಬೊಂಬು ಹಾಕಿ ಹುಡುಕಾಟ ನಡೆಸಲಾಯಿತು. ಬಳಿಕ ಗುಂಡಿಯಲ್ಲಿ ಬಾಲಕರ ಶವಗಳು ಪತ್ತೆಯಾಯಿತು. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
![]() |
![]() |
![]() |
![]() |
![]() |
[ays_poll id=3]