ಬೈಕ್ ಕಳ್ಳತನ: ಇಬ್ಬರು ಆರೋಪಿಗಳ ಬಂಧನ..

K 2 Kannada News
ಬೈಕ್ ಕಳ್ಳತನ: ಇಬ್ಬರು ಆರೋಪಿಗಳ ಬಂಧನ..
WhatsApp Group Join Now
Telegram Group Join Now

K2kannadanews.in

theft Arrest ಮಸ್ಕಿ : ಕಳ್ಳತನವಾಗಿದ್ದ (theft) ಬೈಕ್ (bike) ಮತ್ತು ಸ್ಕೂಟರ್ (Scoter) ಪ್ರಕರಣಕ್ಕೆ ಸಂಬoದಿಸಿದoತೆ ಬೈಕ, ಸ್ಕೂಟರ್ ಸಮೇತ ಆರೋಪಿಗಳನ್ನು (Accused) ವಶಕ್ಕೆ ಪಡೆಯುವಲ್ಲಿ ಮಸ್ಕಿ ಪೋಲಿಸರು (Maski police) ಯಶಸ್ವಿಯಾಗಿದ್ದಾರೆ.

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಇತ್ತೀಚೆಗೆ ಬೈಕ್ ಮತ್ತು ಸ್ಕೂಟರ್ ಗಳ ಕಳ್ಳತನ ಹೆಚ್ಚಾಗಿತ್ತು. ಪ್ರಕರಣಗಳು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಬಸವರಾಜ್(22), ಜಗದೀಶ(24) ಆರೋಪಿಗಳನ್ನು ಬಂದಿಸಿದ್ದಾರೆ. ಕಳುವಾಗಿದ್ದ ಬೈಕ್ ಜೊತೆಗೆ ಇನ್ನೆರಡು ಸ್ಕೂಟರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಾಜಾ ಹುಸೇನ್ ಮಸ್ಕಿ ಎಂಬಾತ ತನ್ನ ಬೈಕ್ ಕಳುವಾಗಿದ್ದ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ‌ನಗರದ ನಾನಾ ಕಡೆ ಬೈಕ್ ಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಗಳು ಹಾಗೂ 05 ಸ್ಕೂಟರ, 05ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಾಲಚಂದ್ರ ಲಕ್ಕಂ ಸಿಪಿಐ ಅವರ ತಂಡದ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಮಸ್ಕಿ ಪೊಲೀಸ್ ಠಾಣೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಸಿ, ಅವರಿಂದ ವಿವಿಧ ಕಂಪನಿಯ ಬೈಕ್, ಸ್ಕೂಟರ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

WhatsApp Group Join Now
Telegram Group Join Now
Share This Article