K2kannadanews.in
Accident News ಬೆಂಗಳೂರು : ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನಕ್ಕೆ ಟೆಂಪೋ ಟ್ರಾವೆಲರ್ ವಾಹನವೊಂದು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಘಟನೆಯಲ್ಲಿ ಟಿಟಿ ವಾಹನ ನುಜ್ಜುಗುಜ್ಜಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ (Kempegowda International Airport) ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಇಂಡಿಗೋ ವಿಮಾನಕ್ಕೆ, ಟೆಂಪೋ ಟ್ರಾವೆಲರ್ನ ಚಾಲಕ ನಿದ್ರೆಯ ಮಂಪರಿನಲ್ಲಿದ್ದ ಕಾರಣ, ಅರಿವಿಗೆ ಬಾರದೇ ಅಪಘಾತವಾಗಿದೆ.
ಇಂಡಿಗೊ A320 ವಿಮಾನದ ಕೆಳಭಾಗಕ್ಕೆ ಟ್ರಾವೆಲರ್ ಡಿಕ್ಕಿ ಆಗುತ್ತಿದ್ದಂತೆ ಚಾಲಕ ಎಚ್ಚೆತ್ತುಕೊಂಡಿದ್ದಾನೆ. ಘಟನೆ ಸಂದರ್ಭದಲ್ಲಿ ಟೆಂಪೋ ಟ್ರಾವೆಲರ್ನಲ್ಲಿ ಯಾರೂ ಇರಲಿಲ್ಲ ಎಂದು ವರದಿಯಾಗಿದೆ. ಘಟನೆಯಾದ ಕೆಲ ಕಾಲ ಆತಂಕದ ವಾತವರಣ ಸೃಷ್ಟಿಯಾಗಿತ್ತು. ಘಟನೆ ಸಂಬಂಧ ನಾಗರಿಕ ವಿಮಾನಯಾನ ನಿರ್ದೇಶನಾಲಯವು ತನಿಖೆ ಕೈಗೊಂಡಿದೆ, ಹೆಚ್ಚಿನ ತನಿಖೆ ಆರಂಭಿಸಿದೆ.