ಟ್ರ್ಯಾಕ್ಟರ್ ಕಾರು ಮುಖಾಮುಖಿ ಡಿಕ್ಕಿ : ಗಂಭೀರ ಗಾಯ
![]() |
![]() |
![]() |
![]() |
![]() |
ಸಿಂಧನೂರು : ತಾಲೂಕಿನ ಸೋಮಲಾಪುರ ಪೆಟ್ರೋಲ್ ಬಂಕ್ ಬಳಿ ಕಬ್ಬು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಸಿಂಧನೂರಿನಿಂದ ಗಂಗಾವತಿ ಕಡೆಗೆ ಕಬ್ಬು ಹತೊಯ್ಯುತ್ತಿದ್ದ ಟ್ರ್ಯಾಕ್ಟರ್ ಗೆ, ಗಂಗಾವತಿ ಕಡೆಯಿಂದ ಸಿಂಧನೂರಿಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜು ಗುಜ್ಜಾಗಿದೆ. ಈ ವೇಳೆ ಮುಕುಂದ ಗ್ರಾಮದ ವ್ಯಕ್ತಿ ವೆಂಕಟರೆಡ್ಡಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ಚಿಕಿತ್ಸೆಗಾಗಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಿಂಧನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು ಪ್ರಕರಣ ದಾಖಲಿಸಲಾಗಿದೆ.
![]() |
![]() |
![]() |
![]() |
![]() |