K2kannadanews.in
Bus fare ರಾಯಚೂರು : ರಾಜ್ಯ ಸರ್ಕಾರ ರಾತ್ರೋ ರಾತ್ರಿ ರಾಜ್ಯದಾದ್ಯಂತ ಬಸ್ ಪ್ರಯಾಣ ದರ ಹೆಚ್ಚಳ ಮಾಡಿದ್ದು ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡಲು ಇನ್ನು ಎಷ್ಟು ದರವಾಗುತ್ತದೆ ಎಂಬ ವಿವರ ಇಲ್ಲಿದೆ. ರಾಜ್ಯ ಸರ್ಕಾರ ಕೆಎಸ್‌ಆರ್ ಟಿಸಿ ಸೇರಿದಂತೆ ಎಲ್ಲಾ ಸಾರಿಗೆ ನಿಗಮಗಳ ಬಸ್ ಗಳ ಟಿಕೆಟ್ ದರವನ್ನು ಶೇ.15 ಕ್ಕೆ ಏರಿಕೆ ಮಾಡಿತ್ತು.
ಪರಿಷ್ಕೃತ ದರ ಪಟ್ಟಿ ಪ್ರಕಾರ 100 ಕ್ಕೆ 15 ಹೆಚ್ಚಿದಂತಾಗಿದೆ. ರಾಯಚೂರಿನಿಂದ ಸಿರವಾರಕ್ಕೆ 45 ಇದ್ದ ದರ ಇಂದಿನಿದ 53 ರೂಪಾಯಿ ಆಗಿದೆ. ಹೀಗೆ ಬೆಂಗಳೂರು-ರಾಯಚೂರು 515 ರೂ. ಇತ್ತು, ಈಗ 638 ರೂ. ಟಿಕೆಟ್ ದರ (78 ರೂ. ಏರಿಕೆ), ಹೀಗೆ ಕೆಎಸ್ಆರ್ಟಿಸಿ ಎಕ್ಸ್ಪ್ರೆಸ್ ಬಸ್ಗಳ ಟಿಕೆಟ್ ದರ ಪಟ್ಟಿ ಇಲ್ಲಿದೆ.
ಬೆಂಗಳೂರು-ಕಲಬುರಗಿ 706 ರೂ. ಇತ್ತು, ಈಗ 805 ರೂ. ಟಿಕೆಟ್ ದರ (99 ರೂಪಾಯಿ ಏರಿಕೆಯಾಗಿದೆ), ಬೆಂಗಳೂರು-ಹಾವೇರಿ 360 ರೂ. ಇತ್ತು, ಈಗ 474 ರೂ. ಟಿಕೆಟ್ ದರ (54 ರೂ. ಏರಿಕೆ), ಬೆಂಗಳೂರು-ಶಿವಮೊಗ್ಗ 288 ರೂ. ಇತ್ತು, ಈಗ 356 ರೂ. ಟಿಕೆಟ್ ದರ (44 ರೂ. ಏರಿಕೆ), ಬೆಂಗಳೂರು-ಮಂಗಳೂರು 367 ರೂ. ಇತ್ತು, ಈಗ 454 ರೂ. ಟಿಕೆಟ್ ದರ (56 ರೂ. ಏರಿಕೆ )
ಬೆಂಗಳೂರು-ಉಡುಪಿ 426 ರೂ. ಇತ್ತು, ಈಗ 516 ರೂ. ಟಿಕೆಟ್ ದರ (64 ರೂ. ಏರಿಕೆ), ಬೆಂಗಳೂರು-ಬೆಳಗಾವಿ 530 ರೂ. ಇತ್ತು, ಈಗ 697 ರೂ. ಟಿಕೆಟ್ ದರ (80 ರೂ. ಏರಿಕೆ), ಬೆಂಗಳೂರು-ಹುಬ್ಬಳ್ಳಿ 426 ರೂ. ಇತ್ತು, ಈಗ 563 ರೂ. ಟಿಕೆಟ್ ದರ (64 ರೂ. ಏರಿಕೆ), ಬೆಂಗಳೂರು-ಬಳ್ಳಾರಿ 328 ರೂ. ಇತ್ತು, ಈಗ 424 ರೂ. ಟಿಕೆಟ್ ದರ (50 ರೂ. ಏರಿಕೆ), ಬೆಂಗಳೂರು-ಯಾದಗಿರಿ 616 ರೂ. ಇತ್ತು, ಈಗ 755 ರೂ. ಟಿಕೆಟ್ ದರ (93 ರೂ. ಏರಿಕೆ)