ದೇವದುರ್ಗ : ಚಿರತೆ ದಾಳಿಯಿಂದ ಮೂವರಿಗೆ ಗಂಭೀರ ಗಾಯ..

K 2 Kannada News
ದೇವದುರ್ಗ : ಚಿರತೆ ದಾಳಿಯಿಂದ ಮೂವರಿಗೆ ಗಂಭೀರ ಗಾಯ..
WhatsApp Group Join Now
Telegram Group Join Now

K2kannadanews.in

leopard attack ದೇವದುರ್ಗ : ತಾಲ್ಲೂಕಿನ ಕುಮದಾಳ ಗ್ರಾಮದಲ್ಲಿ ಚಿರತೆಯೊಂದು (leopard) ಪ್ರತ್ಯಕ್ಷವಾಗಿದ್ದು ಮೂವರ ಮೇಲೆ ದಾಳಿ (Attack) ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ.

ರಾಯಚೂರು (Raichur) ಜಿಲ್ಲೆ ದೇವದುರ್ಗ (Devadurga) ತಾಲ್ಲೂಕಿನ ಕಮದಾಳು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿ, ಏಕಾಏಕಿ ಮೂವರ ಮೇಲೆ ಚಿರತೆ ದಾಳಿ, ಗಂಭೀರ ಗಾಯಗೊಳಿಸಿದೆ. ಚಿರತೆ ಪ್ರತ್ಯಕ್ಷ ಸ್ಥಳಕ್ಕೆ ಪೊಲೀಸ್ (police) ಹಾಗೂ ಅರಣ್ಯ (Forest) ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನೂ ಗಾಯಗೊಂಡ, ಮಲ್ಲಣ್ಣ ಕಮದಾಳ, ರಂಗನಾಥ ಕಮದಾಳ, ಮೇಶ ಕಮದಾಳ ಮೂವರನ್ನು ದೇವದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

ಜಮೀನಿಗೆ ತೆರಳಿದ ವೇಳೆ ಚಿರತೆ ದಾಳಿ ಮಾಡಿದ ಹಿನ್ನೆಲೆ, ಕಮದಾಳು ಸೇರಿದಂತೆ ಯರಮಸಾಳ, ಜೇರಬಂಡಿ, ಗುಂಡಗುರ್ತಿ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಕೋಡಲೆ ಕ್ರಮಕೈಗೊಂಡು ಚಿರತೆ ಹಿಡಿದು ಆತಂಕ ದೂರ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article