K2kannadanews.in
Crime News ರಾಯಚೂರು : ಮೂರು ಪ್ರತ್ಯೇಕ ಪ್ರಕರಣದಲ್ಲಿ ಒಂದೇ ದಿನ ರಾಜಲಬಂಡಾ ಕಾಲುವೆಯಲ್ಲಿ ಐದು ಜನ ನೀರುಪಾಲುಗಿದ್ದು, ಇಬ್ಬರನ್ನು ಕಾಪಾಡಿದ ಘಟನೆ ಗಾಣದಾಳ, ಪಂಚಮುಖಿ ಬಳಿ ನಡೆದಿದೆ.
ರಾಯಚೂರು ತಾಲ್ಲೂಕು ಗಾಣದಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಓರ್ವ ಅನಾಮಧೇಯ ವ್ಯಕ್ತಿ ಶವ ಪತ್ತೆಯಾಗಿದ್ದು, ಇಬ್ಬರು ಮಕ್ಕಳು ನಾಪತ್ತೆಯಾದರೇ, ಇನ್ನಿಬ್ಬರು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ. ಗಡಿ ಭಾಗದ ದೊಡ್ಡಿ ಸಿಂಧನೂರು ಬಳಿ ಒಂದು ಅನಾಮಧೇಯ ಶವ ಪತ್ತೆಯಾಗಿದೆ, ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.
ಇನ್ನೂ ಪಂಚಮುಖಿ ದೇವಸ್ಥಾನಕ್ಕೆ ಬಂದಿದ್ದ ಇಬ್ಬರು ಮಕ್ಕಳು ಕಾಲುವೆಯಲ್ಲಿ ನಾಪತ್ತೆಯಾಗಿದ್ದಾರೆ. ಗದ್ವಾಲ್ ಮೂಲದ ಕುಟುಂಬವೊಂದು ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ಬಂದಿತ್ತು. ಈ ವೇಳೆ ಮಹಿಳೆಯರು ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ವೇಳೆ, ತಂದೆ ಮಕ್ಕಳನ್ನ ಕರೆದುಕೊಂಡು ಪಕ್ಕದ ಕಾಲುವೆ ಬಳಿ ಬಂದಿದಾಗ ಕುಡಿದು ಕಾಲುವೆ ಪಕ್ಕ ಮಲಗಿದ್ದಾನೆ ತಂದೆ. ಮಕಗಕಳು ಕಾಲುವೆಗೆ ಆಟವಾಡಲು ನೀರಿಗೆ ಇಳಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಗದ್ವಾಲ್ ಮೂಲದ ಅಂಜಲಿ (14) ಮತ್ತು ಸಹೋದರ ವೆಂಕಟೇಶ(13) ಕೊಚ್ಚಿ ಹೊದವರು ಎನ್ನಲಾಗುತ್ತಿದೆ. ಮಕ್ಕಳು ಕಾಲುವೆಗೆ ಬಿದ್ದಾಗ ಗ್ರಾಮಸ್ಥರು ಹುಡುಕಾಟ ನಡೆಸಿದರು ಮಕ್ಕಳ ದೇಹಗಳು ಸಿಗಲಿಲ್ಲ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆನಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗ್ರಾಮಸ್ಥರಿಂದ ಕಾರ್ಯಚರಣೆ ನಡೆಸಿದ್ದಾರೆ.
ಗಾಣದಾಳ ಗ್ರಾಮದಲ್ಲಿ ಕಾಲುವೆ ಮೇಲೆ ಆಟವಾಡುತ್ತಿದ್ದಾಗ ಮಕ್ಕಳು ಆಯತಪ್ಪಿ ಬಿದ್ದದ್ದಾರೆ. ಈ ವೇಳೆ ಅಲ್ಲೆ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರಿಂದ ಮಕ್ಕಳ ರಕ್ಷಣೆ ಮಾಡಿದ್ದಾರೆ. ಇಡಪನೂರು ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.