This is the title of the web page
This is the title of the web page
Crime News

ಜಿಲ್ಲೆಯ ಮೂರು ಮಟ್ಕಾ ಬುಕ್ಕಿಗಳು ಗಡಿಪಾರು


ರಾಯಚೂರು: ಮಟ್ಕಾ ಬುಕ್ಕಿಗಳ ಹಾವಳಿ ಹೆಚ್ಚಾಗಿದ್ದು. ಆದ್ದರಿಂದ ಮೂವರು ಮಟ್ಕಾ ಬುಕ್ಕಿಗಳನ್ನ ಗಡಿಪಾರು ಮಾಡಲಾಗಿದೆ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಮೂವರು ಮಟ್ಕಾ ಬುಕ್ಕಿಗಳನ್ನ ಗಡಿಪಾರು ಮಾಡಲಾಗಿದೆ.

ನಿಂಗಪ್ಪ, ಆದಪ್ಪ, ಮತ್ತು ಶಾಸ್ತ್ರೀ ಎಂಬವರನ್ನ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಆದೇಶ ಹೊರಡಿಸದ್ದಾರೆ. ಇತ್ತಿಚಿಗೆ ಜಿಲ್ಲೆಯಲ್ಲಿ ಜೂಜು, ಮಟ್ಕಾ ಬುಕ್ಕಿಗಳ ಹಾವಳಿ ಹೆಚ್ಚಾಗಿದೆ. ಪೊಲೀಸರು ಎಷ್ಟೇ ಎಚ್ಚರಿಕೆ ಕೊಟ್ಟರು, ಕದ್ದುಮುಚ್ಚಿ ಮಟ್ಕಾ ದಂದೆ ನಡೆಸುತ್ತಿದ್ದ ಮೂವರನ್ನ ಜಿಲ್ಲೆಯಿಂದ ಹೊರಗೆ ಹಾಕಲಾಗಿದೆ.

ಚುನಾವಣೆಯ ಮುನ್ನವೇ ಮಟ್ಕಾ ಚಟುವಟಿಕೆಯಲ್ಲಿ ಭಾಗಿಯಾದ ಜೂಜುಕೋರರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದ್ದು, ಮತ್ತೆ ಯಾರಾದರೂ ಈ ದಂದೆಯಲ್ಲಿ ಕಾಣಿಸಿಕೊಂಡರೆ ಅವರನ್ನು ಕೂಡ ಗಡಿ ಪಾರು ಮಾಡವುದಾಗಿ ಎಚ್ಚರಿಕೆ ಕೊಡಲಾಗಿದೆ.


[ays_poll id=3]