K2kannadanews.in
Crime News ರಾಯಚೂರು : ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆಂದು ತೆರಳಿದ ಹಾಸನ ಮೂಲದ ಮೂವರು ಯುವಕರು ತುಂಗಭದ್ರ ನದಿಗೆ ಸ್ನಾನಕ್ಕೆ ತೆರಳಿದ ವೇಳೆ ನಾಪತ್ತೆಯಾದ ಘಟನೆ ಜರುಗಿದೆ.
ರಾಯಚೂರು ಬಳಿಯ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆಂದು ಹಾಸನ ಮೂಲದ ಏಳು ಜನರ ಯುವಕರ ತಂಡ ಆಗಮಿಸಿತ್ತು. ಈ ವೇಳೆ ತುಂಗಭದ್ರಾ ನದಿಗೆ ಪುಣ್ಯ ಸ್ನಾನಕ್ಕೆ ತೆರಳಿದ್ದರು. ತುಂಗಭದ್ರ ನದಿ ಮೈದುಂಬಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದ ವತಿಯಿಂದ ಸಾಕಷ್ಟು ಎಚ್ಚರಿಕೆಯನ್ನು ಧ್ವನಿವರ್ಧಕದ ಮೂಲಕ ನೀಡಲಾಗುತ್ತಿತ್ತು. ಅದನ್ನು ಲೆಕ್ಕಿಸದೆ ಹಾಸನ ಮೂಲದ ಯುವಕರು ನದಿಗೆ ಸ್ನಾನಕ್ಕೆಂದು ಇಳಿದಿದ್ದಾರೆ. ಏಳು ಜನರ ತಂಡದಲ್ಲಿ ಅಜಿತ್(20), ಸಚಿನ್(20) ಹಾಗೂ ಪ್ರಮೋದ(19) ಮೂವರು ನಾಪತ್ತೆಯಾಗಿದ್ದಾರೆ.
ಮೇಲ್ಭಾಗದಲ್ಲಿ ಹೆಚ್ಚಿನ ಮಳೆಯಿಂದ ಈಗಾಗಲೇ ತುಂಗಭದ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭಕ್ತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮಠದ ಆಡಳಿತ ವರ್ಗವು ಕೂಡ ಸಾಕಷ್ಟು ಮುನ್ನೆಚ್ಚರಿಕೆಗಳನ್ನ ತೆಗೆದುಕೊಂಡಿದ್ದು ಧ್ವನಿ ವರ್ಗದ ಮೂಲಕ ನದಿಗೆ ಯಾರು ಹಿಡಿಯದಂತೆ ಸೂಚನೆ ನೀಡಲಾಗಿದ್ದರೂ ಈ ಘಟನೆ ಜರುಗಿದೆ. ಸದ್ಯ ನೀರು ಪಾಲದ ಯುವಕರನ್ನ ಹುಡುಕುವ ಕಾರ್ಯಾಚರಣೆ ನಡೆಯುತ್ತಿದ್ದು ಮಂತ್ರಾಲಯ ಪೊಲೀಸ್ ಮಠದ ನುರಿತ ಈಜು ತಜ್ಞರ ತಂಡ ಮತ್ತು ನುರಿತ ನಾವಿಕರ ತಂಡದಿಂದ ಶೋಧ ಕಾರ್ಯನಡೆಯುತ್ತಿದೆ.