ಮಹಾವಿಷ್ಣುವಿನ ದಶವತಾರಗಳಲ್ಲೊಂದು ಕೃಷ್ಣಾವತಾರ : ಶ್ರೀಕೃಷ್ಣ ಜನ್ಮ ಸ್ಮರಣಾರ್ಥವೇ ಈ ಹಬ್ಬ

K 2 Kannada News
ಮಹಾವಿಷ್ಣುವಿನ ದಶವತಾರಗಳಲ್ಲೊಂದು ಕೃಷ್ಣಾವತಾರ : ಶ್ರೀಕೃಷ್ಣ ಜನ್ಮ ಸ್ಮರಣಾರ್ಥವೇ ಈ ಹಬ್ಬ
Oplus_131072
WhatsApp Group Join Now
Telegram Group Join Now

K2kannadanews.in

Krishna jnmashtami : ಇಂದು ನಾಡಿನಾಧ್ಯಂತ ಕೃಷ್ಟಾಷ್ಟಮಿ ಸಂಬ್ರಮ ಮನೆ ಮಾಡಿದೆ. ಕೃಷ್ಣ ಜನ್ಮಾಷ್ಟಮಿ ಮಹಾವಿಷ್ಣುವಿನ ದಶವತಾರಗಳಲ್ಲಿ ಒಂದಾದ ಕೃಷ್ಣಾವತಾರದ ನೆನಪಿಗಾಗಿ ಅಥವಾ ಶ್ರೀಕೃಷ್ಣ ಜನ್ಮ ಸ್ಮರಣಾರ್ಥ ಆಚರಿಸುವ ಹಬ್ಬವಾಗಿದೆ. ಶ್ರಾವಣ ಮಾಸದಲ್ಲಿ  ಬರುವ ಕೃಷ್ಣ ಪಕ್ಷದ ಅಷ್ಟಮಿಯು ಶ್ರೀಕೃಷ್ಣನ ಜನನ ದಿನ. ಈ ಒಂದು ಕೃಷ್ಣಾಷ್ಟಮಿಗೆ ಸಣ್ಣದಾಗಿ‌ ಹಿನ್ನೆಲೆ ನೋಡುವುದಾದರೆ.

ಮಧುರೆಯ ರಾಜ ಕಂಸ, ತನ್ನ ತಂಗಿ ದೇವಕಿಯ ವಿವಾಹದ ಮೆರವಣಿಗೆ ಸಾಗುತ್ತಿದ್ದಾಗ, ದೇವಕಿಯ 8ನೇ ಮಗನಿಂದ ನಿನಗೆ ಮರಣ ಬರಲಿದೆ ಎಂಬ ಅಶರೀರವಾಣಿ ಕೇಳುತ್ತದೆ. ಇದರಿಂದ ಭಯಗೊಂಡ ಕಂಸ ತಂಗಿ ಬಾವನನ್ನೇ ಕೊಲ್ಲಲು ಬಂದಾಗ ದೇವಕಿ ಅಣ್ಣನ ಬಳಿ ಪತಿಯ ಜೀವ ಭಿಕ್ಷೆ  ಬೇಡುತ್ತಾಳೆ. ದೇವಕಿ ನನಗೆ ಜನಿಸಿದ ಎಲ್ಲಾ ಮಕ್ಕಳನ್ನೂ ನಿನಗೇ ಒಪ್ಪಿಸುತ್ತೇನೆ, ನನ್ನ ಪತಿಯನ್ನು ಬಿಟ್ಟು ಬಿಡು ಬೇಡಿಕೊಳ್ಳುತ್ತಾಳೆ. ಆಗ ಕಂಸನು ಅವರನ್ನು ಕಾರಾಗೃಹಕ್ಕೆ ತಳ್ಳುತ್ತಾನೆ. ಆತನು ಜನಿಸಿದ ಏಳು ಮಕ್ಕಳನ್ನೂ ಕೊಂದದ್ದರಿಂದ ಆತನ ಪಾಪದ ಕೊಡವು ತುಂಬಿ ತುಳುಕುತ್ತಿರುತ್ತದೆ.

ಇದೇ ವೇಳೆ ದೇವಕಿಯು 8ನೇ ಮಗುವಿಗೆ ಜನ್ಮನೀಡುತ್ತಾಳೆ. ಮೆರವಣಿಗೆಯಲ್ಲಿ ಎಚ್ಚರಿಸಿದ ಅಶರೀರ ವಾಣಿಯಂತೆ ವಸುದೇವನು ತನಗೆ ಜನಿಸಿದ ಗಂಡು ಮಗುವನ್ನು ಯಶೋದೆಯ ಬಳಿ ಇಟ್ಟು ಯಶೋದೆಯ ಬಳಿ ಇರುವ ಹೆಣ್ಣು ಮಗುವನ್ನು ಕಾರಾಗೃಹಕ್ಕೆ ಕರೆತಂದು ದೇವಕಿಯ ಬಳಿ ಮಲಗಿಸುತ್ತಾನೆ. ಮಗು ಜನಿಸಿದ ವಿವರ ಕೇಳಿ  ಕಂಸ ಓಡೋಡಿ ಬರುತ್ತಾನೆ. ಹಸುಗೂಸನ್ನು ಕೊಲ್ಲಲು ಬಂಡೆಗೆ ಅಪ್ಪಳಿಸಿದಾಗ ಆ ಕೂಸು ಆಕಾಶಕ್ಕೆ ನೆಗೆದು ವಿಷ್ಣುವಿನ ಸಹಾಯಕಿ ಯೋಗಮಾಯೆಯ ರೂಪತಳೆದು ನಿನ್ನನ್ನು ಸಂಹರಿಸುವ ಶಿಶು ಜನ್ಮವೆತ್ತಿ ಬೆಳೆಯುತ್ತಿದೆ ಎಂದು ಹೇಳಿ ಮಾಯವಾದಳು ಇದನ್ನು ಕೇಳಿದ ಕಂಸನು ಭಯಭೀತನಾಗುತ್ತಾನೆ.

ಹರಿಯು ಜನಿಸಿದ ಈ ಶುಭಗಳಿಗೆಯನ್ನೇ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತೇವೆ. ಇತ್ತ ನಂದಗೋಕುಲದಲ್ಲಿ ನಂದರಾಜನ ಮನೆಯಲ್ಲಿ ಆ ಹಸುಗೂಸು ಬೆಳೆಯುತ್ತಿರುತ್ತದೆ. ಕಂಸನು ಹರಿಯನ್ನು ಹರಣ ಗೈಯಲು ಬಗೆ ಬಗೆಯ ಪ್ರಯತ್ನ ಮಾಡಿದರೂ ಆತನ ಯಾವ ಪ್ರಯತ್ನವೂ ಸಫ‌ಲವಾಗುವುದಿಲ್ಲ. ಮುರಾರಿಯ ಬಾಲಲೀಲೆಗಳನ್ನು ವಿವರಿಸಲು ಪುಟಗಳು ಸಾಲದು. ಕೃಷ್ಣನು ಹಲವಾರು ರೀತಿಯಲ್ಲಿ ತನ್ನ ಬಾಲ ಲೀಲೆಗಳನ್ನು ತೋರಿಸುತ್ತಾ ಬೆಳೆಯುತ್ತಾನೆ. ಕೊನೆಗೆ ಈತನೇ ತನ್ನ ಮಾವನಾದ ಕಂಸನನ್ನು ವಧಿಸುತ್ತಾನೆ.

ಅಷ್ಟಮಿಯಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮಿಂದು ಶುಚಿಭೂತನಾಗಿ ತಳಿರು, ತೋರಣ ಸಾರಣಾದಿಗಳಿಂದ ಮನೆಯನ್ನು ಸಿಂಗರಿಸಿ, ವ್ರತ ಸಂಕಲ್ಪ ಮಾಡಿ ಶ್ರೀಕೃಷ್ಣನ ಕಥಾಶ್ರವಣ ಮಾಡಿ ರಾತ್ರಿ ವಿಶೇಷ ಪೂಜೆ ಸಲ್ಲಿಸುವುದು ಈ ಹಬ್ಬದ ವೈಶಿಷ್ಟ್ಯ. ಉಡುಪಿ, ಮಧುರಾ, ವೃಂದಾವನ, ಮುಂತಾದೆಡೆಗಳಲ್ಲಿ ಕೃಷ್ಣನ ಮೂರ್ತಿಯನ್ನು ಉಯ್ನಾಲೆಯಲ್ಲಿಟ್ಟು ಲಾಲಿ ಹಾಡಿ ತೂಗಲಾಗುವುದು. ಬೃಂದಾವನದಲ್ಲಿ ಇಂದಿಗೂ ಹೆಣ್ಣು ಮಕ್ಕಳು ಶ್ರೀಕೃಷ್ಣನ ಮೂರ್ತಿಯ ಸುತ್ತಲೂ ಸುತ್ತುಗಟ್ಟಿ ನರ್ತಿಸುವುದು ಕಾಣಸಿಗುತ್ತದೆ.‌

WhatsApp Group Join Now
Telegram Group Join Now
Share This Article