K2kannadanews.in
Crime news ವೈರಲ್ ವೀಡಿಯೋ : ಸಾಮಾಜಿಕ ಜಾಲತಾಣಗಳು ಒಂದಾಗಿನಿಂದ ಒಂದಲ್ಲ ಎಂದು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇನ್ನು ಇಲ್ಲೊಬ್ಬ ವ್ಯಕ್ತಿ ಬಕ್ತನ ಸೋಗಿನಲ್ಲಿ ಆಗಮಿಸಿ ದೇವರನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆಯ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ
ಹೌದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಉರವಕೊಂಡ ಪಟ್ಟಣದಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ಈ ಒಂದು ಘಟನೆ ನಡೆದಿದೆ ಎಂದು ಹೇಳಲಾಗುತ್ತದೆ. ಕಳ್ಳನೊಬ್ಬ ಭಕ್ತನಂತೆ ದೇವಸ್ಥಾನ ಪ್ರವೇಶಿಸಿ ಅಲ್ಲಿದ್ದ ಸಾಯಿಬಾಬಾ ಕಟ್ಟೆಯ ಮೇಲೆ ಕೂರುತ್ತಾನೆ. ನಂತರ ಅತ್ತ ಇತ್ತ ನೋಡಿ ಸಾಯಿಬಾಬ ಪ್ರತಿಮೆ ಮುಂದೆ ಇದ್ದ ಸಣ್ಣ ವಿಗ್ರಹ, ಬೆಳ್ಳಿಯ ಬಟ್ಟಲು, ಗಂಟೆಯನ್ನು ಕದ್ದುಕೊಂಡು, ಅವುಗಳನ್ನು ಬ್ಯಾಗ್ನಲ್ಲಿ ತುಂಬಿಕೊಂಡಿದ್ದಾನೆ. ಈ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಲ ಹೊತ್ತು ಸಾಯಿಬಾಬನ ಮುಂದೆ ಕುಳಿತ ಕಳ್ಳ, ಯಾರೂ ಇಲ್ಲದಿದ್ದು ಗಮನಿಸಿ, ದೇವರೆದುರು ಕುಳಿತು ಸಾಯಿಬಾಬಾರ ಪಂಚಲೋಹದ ವಿಗ್ರಹ, ಬೆಳ್ಳಿಯ ಬಟ್ಟಲು ಹಾಗೂ ಗಂಟೆಯನ್ನು ಕದ್ದಿದ್ದಾನೆ.
ನಂತರ ದೇವಸ್ಥಾನದಲ್ಲಿ ವಿಗ್ರಹ, ಬೆಳ್ಳಿ ಬಟ್ಟಲು ಕಳ್ಳತನವಾಗಿರುವ ಬಗ್ಗೆ ಅರ್ಚಕರಿಗೆ ತಿಳಿದಿದೆ. ಆಗ ದೇವಸ್ಥಾನದ ಟ್ರಸ್ಟಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ದೇವಸ್ಥಾನದ ಧರ್ಮಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಗ್ರಹ, ಬೆಳ್ಳಿ ಪಾತ್ರೆ, ದೇವಸ್ಥಾನದ ಗಂಟೆಗಳನ್ನು ಕದ್ದ ಕಳ್ಳನಿಗಾಗಿ ಹುಡುಕಾಟ ನಡೆಸಿದ್ದಾರೆ.