K2kannadanews.in
Crime news ಮಂಗಳೂರು : ಮಟ ಮಟ ಮಧ್ಯಾಹ್ನವೇ ಸಿನಿಮಾ ಶೈಲಿಯಲ್ಲಿ ಬ್ಯಾಂಕ್ನಲ್ಲಿ ದರೋಡೆ ನಡೆದಿದೆ. ಮಂಗಳೂರಿನ ಉಲ್ಲಾಳದ ಕೆಸಿ ರಸ್ತೆಯಲ್ಲಿರೋ ಕೋಟೆಕಾರು ಬ್ಯಾಂಕ್ಗೆ ನುಗ್ಗಿ ಹಾಡುಹಗಲೇ ಸುಮಾರು 10 ರಿಂದ 12 ಕೋಟಿ ಹಣದೊಂದಿಗೆ ಚಿನ್ನ ಕದ್ದು ಎಸ್ಕೇಪ್ ಆದ ಘಟನೆ ನಡೆದಿದೆ.
ಮಧ್ಯನ ಒಂದು ಗಂಟೆ ಸುಮಾರಿಗೆ ಬ್ಯಾಂಕ್ಗೆ ನುಗ್ಗಿದ ಐದು ಜನರ ಖತರ್ನಾಕ್ ಕಳ್ಳರ ಗ್ಯಾಂಗ್ ಸಿಬ್ಬಂದಿಗೆ ಬೆದರಿಸಿ ಕೋಟಿಗಟ್ಟಲೇ ಹಣದ ಜೊತೆಗೆ ಚಿನ್ನ ಕದ್ದು ಎಸ್ಕೇಪ್ ಆಗಿದ್ದಾರೆ. ಸುಮಾರು 12 ಕೋಟಿ ಹಣ ಮತ್ತು ಚಿನ್ನ ಕದ್ದು ಎಸ್ಕೇಪ್ ಆಗಿದ್ದಾರೆ. ವಿಪಾರ್ಯಾಸವೋ ಪ್ರೀ ಪ್ಲಾನೋ ಗೊತ್ತಿಲ್ಲ. ಇಂದು ಸಿಸಿಟಿವಿ ಕ್ಯಾಮೆರಾ ರಿಪೇರಿಗೆ ನೀಡಲಾಗಿತ್ತು. ಅಷ್ಟೇ ಅಲ್ಲ ಶುಕ್ರವಾರ ಮಧ್ಯಾಹ್ನ ಆದ ಕಾರಣ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಮಸೀದಿಗಾಗಿ ತೆರಳುತ್ತಿದ್ದರು.ಇದೇ ಸಮಯ ನೋಡಿಕೊಂಡು ದರೋಡೆ ಮಾಡಲಾಗಿದೆ. ಫಿಯೆಟ್ ಕಾರಿನಲ್ಲಿ ಬಂದು ಪಿಸ್ತೂಲು, ತಲವಾರು ತೋರಿಸಿ ಲೂಟಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಪ್ರಮುಖ ವಿಚಾರ ಅಂದ್ರೆ ಮಂಗಳೂರಲ್ಲಿ ಸಿಎಂ ಕಾರ್ಯಕ್ರಮ ಇದ್ದ ಕಾರಣ, ಇದ್ದ ಕಾರಣ ಹೆಚ್ಚಿನ ಪೊಲೀಸ್ ಭದ್ರತೆಯಲ್ಲಿ ಪೊಲೀಸರು ಮಗ್ನತಾದ ಕಾರಣ. ಇದೇ ಒಳ್ಳೆಯ ಅವಕಾಶ ಎಂದು ಭಾವಿಸಿದ ದರೋಡೆಕೊರರು, ಪಕ್ಕಾ ಪ್ಲಾನ್ ಮಾಡಿಕೊಂಡೆ ಈ ಒಂದು ಕಾರ್ಯಕ್ಕೆ ಕೈ ಹಾಕಿದಂತಿದೆ.