ರಾಜ್ಯದಲ್ಲಿ 1,316 ಅನಧಿಕೃತ ಶಾಲೆಗಳಿವೆ.. ಯಾಮಾರಬೇಡಿ..
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್: ಪ್ರತಿಯೊಬ್ಬ ಪಾಲಕರಿಗೂ ಕೂಡ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಹಂಬಲವಿರುತ್ತದೆ. ಈ ವ್ಯಾಮೋಹದಲ್ಲಿ ಪಾಲಕರು ಶಾಲೆಯ ಹಿನ್ನೆಲೆ ತಿಳಿದುಕೊಳ್ಳದೆ ದಾಖಲೆ ಮಾಡುವ ಪ್ರಕ್ರಿಯೆ ಮಾಡುತ್ತಿದ್ದಾರೆ. ಇಂತಹ ಪಾಲಕರಿಗೆ ಸರ್ಕಾರದಿಂದ ಶಾಕಿಂಗ್ ನ್ಯೂಸ್! ನೀಡಿದೆ.
ಹೌದು ಮಕ್ಕಳನ್ನು ಉತ್ತಮವಾಗಿರುವ ಶಾಲೆಯಲ್ಲಿ ಓದಿಸಬೇಕೆಂಬ ಕನಸುಳ್ಳವರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿ 1,316 ಅನಧಿಕೃತ ಶಾಲೆಗಳಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯೇ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ. ಮಾನ್ಯತೆ ಪಡೆಯದೇ ಮಕ್ಕಳನ್ನು ಸೇರಿಸಿಕೊಂಡು ಪೋಷಕರನ್ನು ವಂಚಿಸಲಾಗುತ್ತಿದೆ. ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ 471 ಅನಧಿಕೃತ ಶಾಲೆಗಳು ಪತ್ತೆಯಾಗಿವೆ. ರಾಜ್ಯದ ಕೆಲವೆಡೆಯಿಂದ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
![]() |
![]() |
![]() |
![]() |
![]() |