
K2 ನ್ಯೂಸ್ ಡೆಸ್ಕ್ : ರಾಜಕೀಯ ವ್ಯಕ್ತಿಯಾಗಿ ಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಕೆಲಸದಲ್ಲಿದ್ದೇವೆ. ರಾಜಕೀಯ ಸಾಕಷ್ಟು ಸವಾಲಿನ ವೃತ್ತಿಯಾದರೂ ತೃಪ್ತಿ ತಂದಿದೆ ಎಂದ ಸಿಎಂ.
ಜೆ.ಪಿ ನಗರದ ಆರ್ ವಿ ಡೆಂಟಲ್ ಕಾಲೇಜಿನ ಆಡಿಟೋರಿಯಂನಲ್ಲಿ ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮುಖ್ಯ ಮಂತ್ರಿಗಳು ತಮ್ಮ ವಿದ್ಯಾರ್ಥಿ ಜೀವನ, ಜೀವನಾನುಭ, ರಾಜಕೀಯ ವೃತ್ತಿ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರಲ್ಲದೆ ವಿದ್ಯಾರ್ಥಿಗಳಿಗೆ ಸಲಹೆಯನ್ನೂ ನೀಡಿದರು.
ಮೋದಿಯವರೊಂದಿಗೆ ಒಡನಾಟ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಒಡನಾಟದ ಬಗ್ಗೆ ತಿಳಿಸುತ್ತಾ, ಮೋದಿಯವರ ಜೊತೆ ಯಾರಾದರೂ ಕೆಲ ಸಮಯ ಕಳೆದರೂ ಅವರ ಅಭಿಮಾನಿಯಾಗುತ್ತಾರೆ. ಮೋದಿಯವರಿಗೆ ಹೊಸತನ್ನು ಕಲಿಯುವ ಹಂಬಲವಿದೆ. ಎಲ್ಲವನ್ನೂ ಸಕಾರಾತ್ಮಕ ವಾಗಿಯೇ ನೋಡುವ ವ್ಯಕ್ತಿ. ಪರಿಪೂರ್ಣ ವ್ಯಕ್ತಿತ್ವವಿರುವ ವ್ಯಕ್ತಿ ಎಂದರೆ ಅದು ಮೋದಿ. ಅವರ ನೇತೃತ್ವದದಲ್ಲಿ ಭಾರತಕ್ಕೆ ಒಂದು ಸ್ಪಷ್ಟ ಗುರಿ ಸಿಕ್ಕಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಯಶಸ್ಸು ವೈಯಕ್ತಿಕ : ನಿಮ್ಮ ಪ್ರಕಾರ ಯಶಸ್ಸು ಅಂದ್ರೆ ಏನು, ನಿಮಗೆ ಸ್ಪೂರ್ತಿ ಯಾರು ಎಂದು ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿ ಯಶಸ್ಸು ಎನ್ನುವ್ಹದು ಪ್ರತಿಯೊಬ್ಬರೂ ವೈಯಕ್ತಿಕ. ಅಂದುಕೊಂಡಿದ್ದನ್ನು ಸಾಧಿಸಿದರೆ ಅದು ಯಶಸ್ಸು. ಆದರೆ ಸಾಧನೆ ಅದಕ್ಕಿಂತ ದೊಡ್ಡದು. ಯಶಸ್ಸು ವೈಯಕ್ತಿಕವಾದರೆ, ಸಾಧನೆ ಸಮಾಜಕ್ಕೆ ಪೂರಕ ಎಂದರು.
ಬೋರ್ಡ್ ಪರೀಕ್ಷೆಗಳನ್ನು ಮತ್ತಷ್ಟುಡಿಜಿಟಲೀಕರಿಬೇಕು : ವಿದ್ಯಾರ್ಥಿನಿ ಮನವಿ : ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಡಿಜಿಟಲೀಕರಣ ತಲುಪಿಲ್ಲ. ಅದಾಗಲು ಇನ್ನೂ ಸಮಯ ಬೇಕಿದೆ ಎಂದು ಸಿಎಂ ಉತ್ತರಿಸಿದರು. ಟ್ಯಾಬ್,ಮೊಬೈಲ್ ಅನೇಕ ವ್ಯವಸ್ಥೆಗಳ ಮಕ್ಕಳ ಬಳಿ ಇಲ್ಲ. ಮುಂದಿನ ದಿನಗಳಲ್ಲಿ ಡಿಜಿಟಲ್ ಶಿಕ್ಷಣ ಹೆಚ್ಚಾಗಲಿದೆ. ಸರ್ಕಾರದಿಂದಲೇ ಶಿಕ್ಷಣ ಕಲಿಸುವ ತಂತ್ರಾಂಶ ಸಿದ್ದಪಡಿಸಲಾಗುತ್ತಿದೆ ಎಂದರು. ಬೈಜೂಸ್ ಮಾದರಿಯ ತಂತ್ರಾಂಶ ಸಿದ್ದಪಡಿಸಲಾಗುವುದು ಯೆಂದರಲ್ಲದೆ #ವ್ಯವಸ್ಥೆ ಡಿಜಿಟಲೈಸೇಶನ್‌ಗೆ ಸಂಪೂರ್ಣ ಸಿದ್ದವಾದಾಗ ಸರ್ಕಾರ ಆ ನಿಟ್ಟಿನಲ್ಲಿ ಕೂಡ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಸ್ವಾಮಿ ವಿವೇಕಾನಂದ ನನ್ನ ಸ್ಪೂರ್ತಿ : ಸಾಧಕನಿಗೆ ಸಾವು ಅಂತ್ಯವಲ್ಲ ಎಂದು ವಿವೇಕಾನಂದ ಹೇಳಿದ್ದಾರೆ ಸಾವಿನ ನಂತರವೂ ಸಾಧನೆ ಬದುಕುತ್ತದೆ. ನೀವೂ ಕೂಡ ಸಾಧಕರಾಗಬೇಕು ಎಂದು ಮುಖ್ಯ ಮಂತ್ರಿಗಳು ಸಲಹೆ ನೀಡಿದರು.
![]() |
![]() |
![]() |
![]() |
![]() |
[ays_poll id=3]