K2kannadanews.in
Flood in thumgabhadra ರಾಯಚೂರು : ತುಂಗಭದ್ರಾ ಜಲಾಶಯದಿಂದ (thungabhadra dam) ಅಪಾರ ಪ್ರಮಾಣದ ನೀರು (Water) ಬಿಟ್ಟ ಹಿನ್ನೆಲೆಯಲ್ಲಿ ಎಲೆಬಿಚ್ಚಾಲಿ ಗ್ರಾಮದ ಬಳಿ ಇರುವ ರಾಘವೇಂದ್ರ ಸ್ವಾಮಿಗಳ (raghavendar swamy) ಏಕಶಿಲಾ ಬೃಂದಾವನ ಪಾದಗಟ್ಟೆಯವರಿಗೆ ನೀರು ಬಂದಿದೆ.
ಹೌದು ರಾಯಚೂರು (Raichur) ತಾಲೂಕಿನ ಎಲೆಬಿಚ್ಚಾಲಿ ಗ್ರಾಮದಲ್ಲಿ (Village) ಇರುವ ಧಾರ್ಮಿಕ ಕ್ಷೇತ್ರವಾಗಿರುವ, ರಾಯರು ತಪಸ್ಸು ಮಾಡಿರುವ ಸ್ಥಳ ಈ ಒಂದು ಗ್ರಾಮದಲ್ಲಿದೆ. ಹಾಗಾಗಿ ಈ ಒಂದು ಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ಜನ ಭಕ್ತರು ಬಂದು, ಇಲ್ಲಿರುವಂತಹ ರಾಯರು ತಪಸ್ಸು ಮಾಡಿದ ಸ್ಥಳ ಮತ್ತು ಏಕಶಿಲಾ ಬೃಂದಾವನದ ದರ್ಶನ ಮಾಡಿಕೊಂಡು ಹೋಗುತ್ತಾರೆ.
ಆದರೆ ಇಂದು ಬೆಳಗ್ಗೆಯಿಂದಲೇ ಅಪಾರ ಪ್ರಮಾಣದ ನೀರು ತುಂಗಭದ್ರಾ ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ, ಅಪಾಯ ಮಟ್ಟ ಮೀರಿ ನದಿ ಹರಿಯುತ್ತಿದೆ. ಈಗಾಗಲೇ ಪಾದಗಟ್ಟೆಯವರೆಗೂ ನೀರು ಬಂದಿದ್ದು ಭಕ್ತರಿಗೆ ಏಕಶಿಲಾ ಬೃಂದಾವನವರೆಗೆ ಹೋಗಲು ಅವಕಾಶ ನೀಡುತ್ತಿಲ್ಲ. ದೂರದಿಂದಲೇ ದರ್ಶನ ಮಾಡಿಕೊಂಡು ಭಕ್ತರು ವಾಪಸ್ಸಾಗುತ್ತಿದ್ದಾರೆ. ಯಾರು ಕೂಡ ನದಿಗೆ ಇಳಿಯದಂತೆ ಹಗ್ಗ ಕಟ್ಟುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.