K2kannadanews.in
PDO exam ರಾಯಚೂರು : ಅಧಿಕಾರಿಗಳು ಪಿಡಿಒ ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಿತರಣೆ ವೇಳೆ ಮಾಡಿದ್ದ ಎಡವಟ್ಟು ಮರೆಮಾಚಲು ಪರೀಕ್ಷಾರ್ಥಿಗಳ ಮೇಲೆ FIR ದಾಖಲಿಸಿದ ಘಟನೆಗೆ ಸಂಬಂದಿಸಿದಂತೆ ಇದೀಗ ವೀಡಿಯೊ ಈಗ ವೈರಲ್ ಆಗುತ್ತಿದ್ದು, ಮತ್ತೆ ಚರ್ಚೆಗೆ ಕಾರಣವಾಗಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಡಿಒ ಪರೀಕ್ಷೆ ನಡೆದಿತ್ತು. ಆದರೆ ಮುಖ್ಯಸ್ಥರು ಒಂದು ಕೋಣೆಗೆ 24ರಲ್ಲಿ 12 ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ವಿತರಿಸಿದ್ದರು. ವಿದ್ಯಾರ್ಥಿಗಳ ಮುಂದೆ ಲಕೋಟೆ ತೆರೆಯದೆ ಮೊದಲೇ ತೆಗೆದಿರುವುದು ಅನುಮಾಕ್ಕೆ ದಾರಿ ಮಾಡಿಕೊಟ್ಟಿತ್ತು, ಇದೇ ಕಾರಣಕ್ಕೆ ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದರು.
ಅನೇಕ ಜನ ಪರೀಕ್ಷೆ ಬಹಿಷ್ಕರಿಸಿದ್ದರು. ನಂತರ ಪರೀಕ್ಷಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆಗ ಪರೀಕ್ಷಾರ್ಥಿಯೊಬ್ಬ ಪ್ರಶ್ನೆ ಪತ್ರಿಕೆಗಳ ತರುತ್ತಿದ್ದ ಸಿಬ್ಬಂದಿಯನ್ನು ಪ್ರಶ್ನಿಸಿದ ವೀಡಿಯೋ ಮಾಡಿದ್ದರು. ಆ ವೀಡಿಯೋ ಇದೀಗ ಹರಿಬಿಟ್ಟಿದ್ದು, ಈಗ ವೈರಲ್ ಆಗುತ್ತಿದೆ.