K2kannadanews.in
Viral video ವೈರಲ್ ಸುದ್ದಿ : ಮನುಷ್ಯರಂತೆ ನಡೆದುಕೊಂಡು ಹೋಗುತ್ತಿದ್ದ ಮಂಗ ಬಂದು ಇದ್ದಕ್ಕಿದ್ದಂತೆ ಅಲ್ಲಿಂದ ವೇಗವಾಗಿ ಥೇಟ್ ಮಾನವನಂತೆ ಎರಡು ಕಾಲಿನಲ್ಲಿ ಓಡಿದ ದೃಶ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಸೂಕ್ಷ್ಮವಾಗಿ ಈ ವಿಡಿಯೋ ಗಮನಿಸಿದಾಗ ಎಂತವರ ಮನ ಕಲುಕದೆ ಇರಲು ಸಾಧ್ಯವಿಲ್ಲ.
ಹೌದು ವಿದೇಶದಲ್ಲಿರುವ ನ್ಯಾಚುರಲ್ ಲೈಫ್ ಪಾರ್ಕ್‌ನಲ್ಲಿ ಸೆರೆಹಿಡಿಯಲಾದ ವಿಡಿಯೋ ಎಂದು ಹೇಳಾಗುತ್ತಿದೆ. ತನ್ನ ಪಾಡಿಗೆ ತಾನು ಹೋಗುತ್ತಿದ್ದ ಎರಡು ಕೈಗಳನ್ನು ಕಳೆದುಕೊಂಡ ಕೋತಿಯೊಂದು ಮನುಷ್ಯರು ನಡೆದು ಬರುತ್ತಿದ್ದ ಹಾದಿಯಲ್ಲಿ ಆಹಾರ ಅರಸಿಕೊಂಡು ಬಂದಿದೆ. ಈ ವೇಳೆ ದಾರಿಯಲ್ಲಿ ಅದೇನನ್ನೂ ನೊಡಿ, ದಿಢೀರ್ ಎಂದು ಓಡಲು ಪ್ರಾರಂಭಿಸಿದೆ ಮಂಗ, 19 ಸೆಕೆಂಡ್ ದೃಶ್ಯದಲ್ಲಿ ಮಾನವನಂತೆ ಎರಡು ಕಾಲುಗಳಿಂದಲೇ ಮೆಟ್ಟಿಲು ಹತ್ತಿಕೊಂಡು ಓಡಿರುವುದು ನೋಡುಗರ ಮನಗೆದ್ದಿದೆ.
ಆರಂಭದಲ್ಲಿ ಕೋತಿಯ ಓಡಾಟ ಕೆಲವರಿಗೆ ನಗು ತರಿಸಿದರು, ಅಂತಿಮವಾಗಿ ಅದರ ಪರಿಸ್ಥಿತಿ ಎಂಥವರ ಮನಕಲಕುತ್ತೆ. ಎರಡು ಕೈಗಳನ್ನು ಕಳೆದುಕೊಂಡಿದ್ದರೂ ಸಹ ಎರಡು ಕಾಲುಗಳ ಮೇಲೆ ಬದುಕುತ್ತಿರುವ ಮಂಗನ ಬುದ್ಧಿವಂತಿಕೆ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ..