Ad imageAd image

ಉತ್ತರ ಪತ್ರಿಕೆ ನೋಡಿದ ಟೀಚರ್ ಮೈಂಡ್ ಬ್ಲಾಂಕ್..?

K 2 Kannada News
ಉತ್ತರ ಪತ್ರಿಕೆ ನೋಡಿದ ಟೀಚರ್ ಮೈಂಡ್ ಬ್ಲಾಂಕ್..?
WhatsApp Group Join Now
Telegram Group Join Now

K2kannadanews.in

Oplus_0

Romantic Answer Viral : ಪರೀಕ್ಷೆಗಳಲ್ಲಿ (Exam) ಪಾಸ್ (pass) ಆಗೋದಕ್ಕೆ ವಿದ್ಯಾರ್ಥಿಗಳು (Students) ಏನಿಲ್ಲ ಕಸರತ್ತು ಮಾಡುತ್ತಾರೆ. ಚಿತ್ರ ವಿಚಿತ್ರವಾದ ಪ್ರಯೋಗಗಳನ್ನು (Experiment) ಕೂಡ ಆನ್ಸರ್ ಶೀಟ್ ನಲ್ಲಿ ಮಾಡುತ್ತಾರೆ. ಪಾಸಾಗಲು ದೇವರ ನಾಮ ಬರೆದಿದ್ದು, ಉತ್ತರ ಪತ್ರಿಕೆಯಲ್ಲಿ ಪಾಸ್ ಮಾಡಲು ಹಣ (money) ಇಟ್ಟಿದ್ದು ಹೀಗೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಬರೆದ ಉತ್ತರ ಮಾತ್ರ ಭಾರಿ ಸುದ್ದಿಯಾಗಿದೆ. ಈ ಉತ್ತರ ಪತ್ರಿಕೆಯನ್ನು ನೋಡಿದ ಟೀಚರ್‍ ಶಾಕ್ (Teacher shock) ಆಗಿದ್ದಾರೆ.

 

memes-connection ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಉತ್ತರ ಪತ್ರಿಕೆಯನ್ನು ಹಂಚಿಕೊಳ್ಳಲಾಗಿದ್ದು, ಸಖತ್ ವೈರಲ್ (Viral) ಆಗುತ್ತಿದೆ. ಅಷ್ಟಕ್ಕೂ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾದರೂ ಏನು ಅಂದ್ರೆ, ಪ್ರಶ್ನೆ ಪತ್ರಿಕೆಯಲ್ಲಿ ಹೃದಯದ (heqrt) ಚಿತ್ರವನ್ನು ಬರೆದು ಭಾಗಗಳನ್ನು (part’s) ಗುರುತಿಸಿ ಎಂದು ಪ್ರಶ್ನೆಯೊಂದನ್ನು (Questions) ಕೇಳಲಾಗಿತ್ತು. ಅದಕ್ಕೆ ಓರ್ವ ವಿದ್ಯಾರ್ಥಿ ವಿಭಿನ್ನ ರೀತಿಯಲ್ಲಿ ಉತ್ತರಿಸಿದ್ದಾನೆ. ಹೃದಯದ ಚಿತ್ರವನ್ನು ಬರೆದ ಆ ವಿದ್ಯಾರ್ಥಿ ಮಾಡಿದಂತಹ ವಿಶ್ಲೇಷಣೆ (Explanation) ಎಲ್ಲರನ್ನೂ ಶಾಕ್ ಮಾಡುವಂತೆ ಮಾಡಿದೆ. ವಿದ್ಯಾರ್ಥಿ ಹೃದಯದ ಚಿತ್ರವನ್ನು ಬರೆದು ಅದರ ಭಾಗಗಳನ್ನು ಗುರ್ತಿಸುವಾಗ ಪ್ರಿಯಾ, ರೂಪ, ಹಾರಿತ, ಪೂಜಾ, ನಮಿ ಎಂಬ ಯುವತಿಯರಿದ್ದಾರೆ ಎಂದು ವಿವರಣೆ ನೀಡಿದ್ದಾನೆ.

ಪ್ರಿಯಾ (priya) ಎಂಬ ಹುಡುಗಿ ತನ್ನೊಂದಿಗೆ ಇನ್ಸ್ಟಾಗ್ರಾಂ ನಲ್ಲಿ ಚಾಟಿಂಗ್ ಮಾಡ್ತಾಳೆ. ಆಕೆ ಎಂದರೇ ತುಂಬಾ ಇಷ್ಟವೆಂದು ಬರೆದಿದ್ದಾನೆ. ರೂಪ (rupa) ಎಂಬ ಯುವತಿ ಸ್ನಾಪ್ ಚಾಟ್ ನಲ್ಲಿ ಮೆಸೇಜ್ ಮಾಡ್ತಾಳೆ, ತುಂಬಾ ಸುಂದರವಾಗಿರುತ್ತಾಳೆ, ನಮಿತಾ (namita) ನನ್ನ ಎದುರು ಮನೆಯಲ್ಲಿರುತ್ತಾಳೆ. ಆಕೆಯ ಕೂದಲೂ ತುಂಬಾ ಉದ್ದ ಹಾಗೂ ಕಣ್ಣುಗಳು ದೊಡ್ಡದಾಗಿರುತ್ತದೆ, ಪೂಜ (Pooja) ತನ್ನ ಮಾಜಿ ಪ್ರೇಯಸಿ ಎಂದು, ಆಕೆಯನ್ನು ಮರೆಯೋಕೆ ಆಗುತ್ತಿಲ್ಲ ಎಂತಲೂ, ಕೊನೆಯದಾಗಿ ಹರಿತ (Harita) ತನ್ನ ಕ್ಲಾಸ್ ಮೇಟ್ ಎಂದು ಸ್ಪಷ್ಟಪಡಿಸಿದ್ದಾನೆ.

WhatsApp Group Join Now
Telegram Group Join Now
Share This Article