K2kannadanews.in
Crime News ರಾಯಚೂರು : ಹಾಡು ಹೋಗಲೇ ನಡು ರಸ್ತೆಯಲ್ಲಿ ವ್ಯಕ್ತಿಯೊಬ್ಬನ ಚಾಕುವಿನಿಂದ ಇರಿದು ಕೊಲೆ(Murder) ಮಾಡಿದ ಘಟನೆ ನಗರದ ಭಂಗಿಕುಂಟ ಮುಖ್ಯ ರಸ್ತೆಯಲ್ಲಿ (Main road) ನಡೆದಿದೆ. ಹಳಿಯ ಸೆಟಲ್ಮೆಂಟ್ ವಿಚಾರವೇ ಈ ಒಂದು ಕೊಲೆಗೆ ಕಾರಣ ಎಂದು ಮಾತನಾಡಿಕೊಳ್ಳಲಾಗುತ್ತಿದೆ.
ಹೌದು ರಾಯಚೂರು (Raichur) ನಗರದ ಭಂಗಿಕುಂಟ ರಸ್ತೆಯಲ್ಲಿ ಹಾಡು ಹಾಗಲೇ ನಡು ರಸ್ತೆಯಲ್ಲಿ ಸಯ್ಯದ್ ಖದಿರ್ (40) ಎನ್ನುವ ವ್ಯಕ್ತಿ ಕೊಲೆಗೀಡಾಗಿದ್ದಾನೆ. ತಿಮ್ಮಪ್ಪ, ಅನ್ವರ್ ಎಂಬ ಇಬ್ಬರು ಕೊಲೆ ಮಾಡಿದ ಆರೋಪಿಗಳು. ಹಿಂದೆ ಇದೆ ಮೂವರು ಯಾವುದೋ ಒಂದು ಹಳೆಯ ಜಗಳದ ವಿಚಾರದಲ್ಲಿ ಸೆಟ್ಲ್ಮೆಂಟ್ ಗೆ ಹೋದ ಸಂದರ್ಭದಲ್ಲಿ ನಡೆದ ಜಗಳವೇ ಈ ಒಂದು ಕೊಲೆಗೆ ಕಾರಣವಾಯಿತಾ..? ಎಂದು ಶವಗಾರದ ಬಳಿ ನೆರೆದಿದ್ದ ಜನ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈ ಒಂದು ಕೊಲೆಗೆ ನಿಖರ ಕಾರಣ ಏನು ಎಂಬುದು ಕೊಲೆ ಮಾಡಿದ ಆರೋಪಿಗಳಿಂದಲೇ ತಿಳಿಯಬೇಕಿದೆ.
ಕೊಲೆಯಾಗಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಸದರ್ ಬಜಾರ್ ಠಾಣೆಯ ಪೊಲೀಸರು (Police) ಮತ್ತು ಡಿವೈಎಸ್ಪಿ (DYSP) ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿಯನ್ನು ಪಡೆದು ತನಗೆ ಆರಂಭಿಸಿದ್ದಾರೆ. ಕೊಲೆ ಕುರಿತು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಘಟನೆ ಜರುಗಿದ್ದು ಆರೋಪಿಗಳು, ಕೊಲೆ ಮಾಡಿ ನಂತರ ಸದಾರ್ ಬಜಾರ್ ಠಾಣೆಯಲ್ಲಿ ಹೋಗಿ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೊಲೆಗೆ ನಿಖರ ಕಾರಣದ ಬಗ್ಗೆ ಇದೀಗ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.