K2kannadanews.in
Viral news ವೈರಲ್ ಸುದ್ದಿ : ಇದೊಂದು ಹಳೇಯ ಘಟನೆ, ಆದ್ರೂ ಇಂದಿಗೂ ಈ ಘಟನೆ ನೆನೆದರೆ ಮೈ ಜುಮ್ ಎನಿಸುತ್ತೆ. ವಿಮಾನವೊಂದು 24ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿರುವಾಗ, ಛಾವಣಿ ಹಾರಿಹೋದರೆ ಹೇಗಾಗಬೇಡ. ಇಂತಹ ಒಂದು ಘಟನೆ ನಡೆದಿದ್ದು, ಪೈಲಟ್ ಚಾಣಾಕ್ಷತನ ಮತ್ತು ಪ್ರಯಾಣಿಕರ ದೈರ್ಯದಿಂದ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಿತ್ತು.
ಹೌದು ಈ ಒಂದು ಘಟನೆಯು ಏಪ್ರಿಲ್ 28, 1988 ರಂದು ನಡೆದಿದ್ದು, ಅಲೋಹಾ ಏರ್ಲೈನ್ಸ್ ಫ್ಲೈಟ್ ಹಾರುತ್ತಿತ್ತು. ಬೋಯಿಂಗ್ 737-200 ವಿಮಾನದಲ್ಲಿ ಆರು ಸಿಬ್ಬಂದಿ ಮತ್ತು 89 ಪ್ರಯಾಣಿಕರಿದ್ದರು. ಸುಮಾರು 24,000 ಅಡಿ ಎತ್ತರದ ಆಗಸದಲ್ಲಿ ಹಾರುತ್ತಿತ್ತು. ಒಟ್ಟಾರೆ 40 ನಿಮಿಷದ ಪ್ರಯಾಣ ಮಾಡಬೇಕಿತ್ತು. 20 ನಿಮಿಷದ ಹಾರಾಟ ಮುಗಿಸುತ್ತಿದ್ದಾಗ, ವಿಮಾನದ ಮೇಲ್ಛಾವಣಿಯ ಮಧ್ಯದ ಭಾಗ ಇದ್ದಕ್ಕಿದ್ದಂತೆ ಮುರಿದು ಹಾರಿ ಹೋಗಿತ್ತು. ಈ ವೇಳೆ ವಿಮಾನದಲ್ಲಿನ ಓರ್ವ ಸಿಬ್ಬಂದಿ ಹಾರಿ ಹೋಗಿ ಸಾವನ್ನಪ್ಪಿದ್ದಾರೆ.
ಈ ಘನೆಯಿಂದ ದೈರ್ಯಗೆಡದ ಪೈಲಟ್ ತಕ್ಷಣ ವಿಮಾನವನ್ನು ತುರ್ತಾಗಿ ಲ್ಯಾಂಡ್ ಮಾಡಲು ಪ್ರಯತ್ನಿಸಿ,13 ನಿಮಿಷಗಳಲ್ಲಿ, ಹಾನಿಗೊಳಗಾದ ವಿಮಾನವನ್ನು ಮೌಯಿಯ ಕಹುಲುಯಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಪೈಲೆಟ್ ಯಶಸ್ವಿಯಾಗಿದ್ದರು. ಅಲ್ಲಿದ್ದ ಸಿಬ್ಬಂದಿ ವಿಮಾನಕ್ಕಾದ ಹಾನಿ ನೋಡಿ ಆಶ್ಚರ್ಯಕ್ಕೊಳಗಾಗಿದ್ದರು. ಓರ್ವ ಸಿಬ್ಬಂದಿ ಬಿಟ್ಟು ಉಳಿದವರೆಲ್ಲರೂ ಬದುಕುಳಿದರು. ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದರು.