JNIM ರಾಕ್ಷಸರ ಅಟ್ಟಹಾಸ : ಒಂದೇ ಗಂಟೆಯಲ್ಲಿ 600 ಜನರ ಹತ್ಯೆ..!

K 2 Kannada News
JNIM ರಾಕ್ಷಸರ ಅಟ್ಟಹಾಸ : ಒಂದೇ ಗಂಟೆಯಲ್ಲಿ 600 ಜನರ ಹತ್ಯೆ..!
WhatsApp Group Join Now
Telegram Group Join Now

K2kannadanews.in

Crime news ಆಫ್ರಿಕಾ :ಅಲ್ ಖೈದಾ ಮತ್ತು ಐಸಿಸ್​ ಬೆಂಬಲಿತ ಜಮಾತ್ ನುಸ್ರತ್ ಅಲ್ ಇಸ್ಲಾಂ ವಾಲ್ ಮುಸ್ಲಿಮಿನ್ ಉಗ್ರರು ಬುರ್ಕಿನಾ ಫಾಸೊದ ಬಾರ್ಸಲೋಗೋ ನಗರದ ಮೇಲೆ ದಾಳಿ ನಡೆಸಿ 600 ಜನರು ಹತ್ಯೆ ಮಾಡಿದ್ದಾರೆ.

https://www.facebook.com/share/v/KNkZstZR5Zv1P8Vz/

ಆಗಸ್ಟ್ 24, 2024 ರಂದು ಆಫ್ರಿಕಾ ಖಂಡದ ಪೂರ್ವ ರಾಷ್ಟ್ರವಾದ ಬುರ್ಕಿನಾ ಫಾಸೊದಲ್ಲಿ ನಡೆದಿದ್ದ ಆಲ್ ಖೈದಾ, ಐಸಿಸ್ ಬೆಂಬಲಿತ ಉಗ್ರರ ದಾಳಿ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. Jamaat Nusrat al-Islam wal-Muslimin (JNIM) ಎಂಬ ಉಗ್ರ ಸಂಘಟನೆ ಸದಸ್ಯರು ಅಂದು ಬುರ್ಕಿನಾ ಫಾಸೊದ Barsalogho ಬಳಿ ಬೈಕ್, ಕಾರುಗಳಲ್ಲಿ ಬಂದು ದಾಳಿ ಮಾಡಿದ್ದರು.

ಪೂರ್ವ ಆಫ್ರಿಕಾದ ಇತಿಹಾಸದಲ್ಲಿಯೇ ಇದೊಂದು ಅತ್ಯಂತ ಭೀಕರ ಹತ್ಯಾಕಾಂಡ ಎಂದು ಫ್ರೆಂಚ್ ಸರ್ಕಾರದ ಭದ್ರತಾ ಮೌಲ್ಯಮಾಪನ ಘಟಕ ಈಗ ಹೇಳಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರನ್ನು ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ 200 ಜನ ಮೃತಪಟ್ಟಿದ್ದರು ಎಂದು ವಿಶ್ವಸಂಸ್ಥೆ ಅಂದು ಹೇಳಿದ್ದರೆ, 300 ಜನ ಮೃತಪಟ್ಟಿದ್ದರು ಎಂದು JNIM ಹೇಳಿತ್ತು. ಆದರೆ, ಅಂದಿನ ಘಟನೆಯಲ್ಲಿ 600 ಜನ ಮೃತಪಟ್ಟಿದ್ದರು. ಅಲ್ಲದೇ ಉಗ್ರರು ಗುಂಡಿನ ದಾಳಿ ನಡೆಸುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಉಗ್ರರಿಂದ ರಕ್ಷಿಸಿಕೊಳ್ಳಲು ಗ್ರಾಮಸ್ಥರು ಗ್ರಾಮದ ಹೊರವಲಯದ ಸುತ್ತ ಕಂದಕಗಳನ್ನು ನಿರ್ಮಿಸಿದ್ದರು.

ಇದರಿಂದ ಸಿಟ್ಟಾಗಿದ್ದ JNIM ಸಂಘಟನೆ ಕೇವಲ ಒಂದು ಗಂಟೆಯಲ್ಲಿ ಈ ಭೀಕರ ಹತ್ಯಾಕಾಂಡ ನಡೆಸಿದೆ ಎಂದು ಘಟಕ ಹೇಳಿದೆ. ಆಗಸ್ಟ್ 5, 1960 ರಲ್ಲಿ ಫ್ರಾನ್ಸ್‌ನಿಂದ ಸ್ವಾತಂತ್ರ್ಯ ಪಡೆದುಕೊಂಡು ಬುರ್ಕಿನಾ ಫಾಸೊದಲ್ಲಿ ಸದ್ಯ ಜುಂಟಾ ಎಂಬ ಸಂಘಟನೆಯ ಮಿಲಿಟರಿ ಸರ್ಕಾರ ಅಸ್ತಿತ್ವದಲ್ಲಿದೆ. Ibrahim Traore ಎನ್ನುವ ಸೇನಾಧಿಕಾರಿ ಸದ್ಯ ಆ ದೇಶದ ಅಧ್ಯಕ್ಷರಾಗಿದ್ದಾರೆ. ಜುಂಟಾ ಆರ್ಮಿ ಸರ್ಕಾರದ ವಿರುದ್ಧ ದಂಗೆ ಎದ್ದಿರುವ JNIM ಸಂಘಟನೆ ತನ್ನ ಕಾರ್ಯಕ್ಕೆ ಅಡ್ಡಿ ಬರುವ ನಾಗರಿಕರನ್ನು ಕೊಂದು ಹಾಕುತ್ತದೆ. ಈ ಕುರಿತು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.

WhatsApp Group Join Now
Telegram Group Join Now
Share This Article