ಮಾನವಿಯತೆ ಮರೆತು ಊರಿಗೆ ಬಂದ ಆನೆಯನ್ನು ಕ್ರೂರವಾಗಿ ಕೊಂದ ಜನ..

K 2 Kannada News
ಮಾನವಿಯತೆ ಮರೆತು ಊರಿಗೆ ಬಂದ ಆನೆಯನ್ನು ಕ್ರೂರವಾಗಿ ಕೊಂದ ಜನ..
WhatsApp Group Join Now
Telegram Group Join Now

K2kannadanews.in

Shocking Video ಕೋಲ್ಕತ್ತ : ಇತ್ತೀಚೆಗೆ ಕಾಡು ಪ್ರಾಣಿಗಳು (Animals) ಆಹಾರ ಅರಿಸಿ (for food) ಜನವಸತಿ ಪ್ರದೇಶಗಳಿಗೆ ಬರುತ್ತಿರುವ ಘಟನೆಗಳು ಹೆಚ್ಚಾಗಿವೆ. ಅಂತದ್ದೆ ಒಂದು ಘಟನೆ ನಡೆದಿದ್ದು, 6 ಆನೆಗಳ (Elephants) ತಂಡ ಗ್ರಾಮಕ್ಕೆ ನುಗ್ಗಿದ್ದವು, ಇಲ್ಲಿನ ಜನ   ಮಾನವೀಯತೆ (Humanity) ಮರೆತು ಒಂದು ಆನೆಯನ್ನು ಕೊಂದ ಘಟನೆ ನಡೆದಿದೆ.

ಹೌದು ಪಶ್ಚಿಮ ಬಂಗಾಳದ (Pashim bangal) ಜಾರ್‌ಗ್ರಾಮ್ ಜಿಲ್ಲೆಯಲ್ಲಿ ಸ್ಥಳೀಯರ ಆಕ್ರಮಣದಿಂದ (attack) ಆನೆಯೊಂದು ಸಾವನ್ನಪ್ಪಿದೆ (Death). ಗುರುವಾರ ಬೆಳಗ್ಗೆ ಎರಡು ಸಣ್ಣ ಆನೆಮರಿಗಳು ಸೇರಿದಂತೆ 6 ಆನೆಗಳು ಇಲ್ಲಿನ ರಾಜ್ ಕಾಲೇಜ್  ಬಡಾವಣೆಗೆ ನುಗ್ಗಿ ಹಾನಿ ಮಾಡಿವೆ ಎಂದು ವರದಿಯಾಗಿದ್ದು,‌ ಊರೊಳಗೆ ನುಗ್ಗಿದ ಆನೆಗಳನ್ನು ಓಡಿಸಲು ಸ್ಥಳೀಯರು ಚೂಪಾದ ರಾಡ್‌ಗಳು ಮತ್ತು ಬೆಂಕಿಯ ಚೆಂಡುಗಳನ್ನು ಬಳಸಿ, ಗಂಭೀರವಾಗಿ ಗಾಯಗೊಳಿಸಿದ್ದಾರೆ. ಇದರಿಂದ ಆನೆ ನರಳಿ  ಮೃತಪಟ್ಟಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಮಾನವ ಕುಲ ತಲೆ ತಗ್ಗಿಸುವ ಸ್ಥಳೀಯರ ಕೃತ್ಯಕ್ಕೆ ಸಧ್ಯ ನೆಟ್ಟಿಗರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಕ್ಸ್​ನ ಪ್ರೇರಣಾ ಸಿಂಗ್ ಬಿಂದ್ರಾ (pterana sing bindra) ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಆನೆಗಳನ್ನು ಓಡಿಸಲು ಬೆಂಕಿ ಹೊತ್ತಿದ ಕೊಲು ಹಿಡಿದು ಆನೆಯ ಹಿಂದೆ ಜನರು ಓಡಿಹೋಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಮೂಕಪ್ರಾಣಿಗಳ ಮೇಲೆ ದಾಳಿ ಚಿತ್ರಹಿಂಸೆ ಮೊದಲಲ್ಲ. ಸುಪ್ರೀಂ ಕೋರ್ಟ್ ಆದೇಶದ ನಂತರವೂ ಈ ರೀತಿ ಹಿಂಸಾಚಾರ ನಡೆಸಲಾಗುತ್ತಿದೆ ಎಂದು ತಮ್ಮ ಪೋಸ್ಟ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article