ಕೆಡಿಪಿ ಸಭೆ : ಸಮಸ್ಯೆ ಹೇಳ್ಬೇಕಾದ ಅಧಿಕಾರಿಗಳು ಕಣ್ಣೆತ್ತಿಯೂ ನೋಡಿಲ್ಲ..

K 2 Kannada News
ಕೆಡಿಪಿ ಸಭೆ : ಸಮಸ್ಯೆ ಹೇಳ್ಬೇಕಾದ ಅಧಿಕಾರಿಗಳು ಕಣ್ಣೆತ್ತಿಯೂ ನೋಡಿಲ್ಲ..
WhatsApp Group Join Now
Telegram Group Join Now

K2kannadanews.in

KDP Meeting ಸಿಂಧನೂರು : ಇದೇನಪ್ಪಾ ಈ ವಿಡಿಯೋ ಅವರಿವರು ಮೊಬೈಲ್ ನೋಡೋದು ನಮಗ್ಯಾಕೆ ತೋರಿಸ್ತಾರೆ ಅಂತೀರಾ. ಇವರ‌್ಯಾರು ಅಲ್ಲ ಸರ್ ನಮ್ಮ ಸಿಂಧನೂರು ತಾಲ್ಲೂಕು ಮಟ್ಟದ ಅಧಿಕಾರಿಗಳು. ಇಡೀ ಕೆಡಿಪಿ ಸಭೆಯಲ್ಲಿ ಮೊಬೈಲ್ ನೋಡೊದನ್ನ ಬಿಟ್ರೆ ಇನ್ನೇನು ಮಾಡಿಲ್ಲ.

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ , ಇಂದು ಕೆ ಡಿ ಪಿ ಸಭೆ ಮಾಡಲಾಯಿತು. ಶಾಸಕ ಹಂಪನಗೌಡ ಬಾದರ್ಲಿ ಅವರ ಅಧ್ಯಕ್ಷತೆಯಲ್ಲಿ ಈ ಒಂದು ಸಭೆ ಮಾಡಲಾಯಿತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಭೆ ಆರಂಭದಲ್ಲಿ ಗಾಂಭೀರ್ಯತೆ ಕಳೆದುಕೊಂಡಿತ್ತು. ತಾಲೂಕು ಮಟ್ಟದ ಅಧಿಕಾರಿಗಳಾದವರು ಜನರ ಸಮಸ್ಯೆಗಳನ್ನ ಶಾಸಕರಿಗೆ ತಿಳಿಸಬೇಕು. ಆದರೆ ಅಲ್ಲಿ ಶಾಸಕರು ಒಬ್ಬರೇ ಮಾತನಾಡುತ್ತಿದ್ದಾರೆ ಹೊರತು, ಅಧಿಕಾರಿಗಳು ಯಾರು ಕೂಡ ಸಮಸ್ಯೆಗಳನ್ನ ಶಾಸಕರ ಮುಂದೆ ಇಡಲೇ ಇಲ್ಲ.

ಸುಮಾರು ಗಂಟೆಗಳ ಕಾಲ ನಡೆದ ಈ ಒಂದು ಕೆಡಿಪಿ ಸಭೆಯಲ್ಲಿ, ಸಮಸ್ಯೆಗಳ ಪರಿಹಾರದ ಬಗ್ಗೆ ಸರ್ಕಾರದೊಂದಿಗೆ ಮಾತನಾಡಲು, ಅಧಿಕಾರಿಗಳಿಂದ ಮಾಹಿತಿ ಪಡೆಯಲು ಪ್ರಯತ್ನಿಸಿದರು. ಆದರೆ ಅಧಿಕಾರಿಗಳು ಮಾತ್ರ ಕೆಡಿಪಿ ಸಭೆಗೂ ನಮಗೂ ಯಾವುದೇ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದರು. ಸಭೆಯಿಂದ ಹೊರಗೆ ಬಂದ ಕೆಲ ಅಧಿಕಾರಿಗಳನ್ನು ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಕೇಳಿದ್ರೇ, ಅವರಿಗೆ ಅದರ ಬಗ್ಗೆ ಮಾಹಿತಿಯೇ ಇಲ್ಲ. ಇಂಥ ಸಭೆಗಳನ್ನು ಮಾಡಿ ಸಾರ್ವಜನಿಕರ ದುಡ್ಡು, ಯಾಕೆ ಹಾಳು ಮಾಡುತ್ತೀರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

WhatsApp Group Join Now
Telegram Group Join Now
Share This Article