ಲಾರಿ ಓವರ್ ಟೇಕ್ ಮಾಡಲು ಹೋಗಿ ಹಿಂದಿನ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು..

K 2 Kannada News
ಲಾರಿ ಓವರ್ ಟೇಕ್ ಮಾಡಲು ಹೋಗಿ ಹಿಂದಿನ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು..
Oplus_0
WhatsApp Group Join Now
Telegram Group Join Now

K2kannadanews.in

Accident News ಮಾನ್ವಿ : ಓವರ್ ಟೇಕ್ (Overtake) ಮಾಡಲು ಹೋಗಿ ಲಾರಿ (Lorry) ಮತ್ತು ಬೈಕ್ (Bike) ಮಧ್ಯೆ ರಸ್ತೆ ಅಪಘಾತ (Accident) ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದು (Bike rider dies), ಮತ್ತೋರ್ವನಿಗೆ ಗಂಭೀರ ಗಾಯವಾದ ಘಟನೆ ಮಾನ್ವಿಯಲ್ಲಿ ಜರುಗಿದೆ.

ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ಪಟ್ಟಣದ ಪ್ರವಾಸಿ ಮಂದಿರದ (IB) ಬಳಿ ಅಪಘಾತ ಜರುಗಿದೆ. ರಾಯಚೂರಿನಿಂದ ಮಾನ್ವಿಯತ್ತ ಹೊರಟ್ಟಿದ್ದ ಲಾರಿಯನ್ನು, ಹಿಂಬದಿ ಬರುತ್ತಿದ್ದ ಬೈಕ್ ಓವರ್ ಟೇಕ್ ಮಾಡಲು ಹೋದ ವೇಳೆ ಲಾರಿ ಹಿಂಬದಿಯ ಚಕ್ರಕ್ಕೆ ಬೈಕ್ ಸವಾರರು ಸಿಲುಕಿದ್ದಾರೆ.

ಅಪಘಾತದಲ್ಲಿ ಬೈಕ್ ಸವಾರ ತಾಯಪ್ಪ(tayappa 20) ಸ್ಥಳದಲ್ಲೆ ಸಾವನ್ನಪ್ಪಿದ ಯುವಕ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಸವಾರ ಕೃಷ್ಣ ನಾಯಕ್ (krishna nayak 18) ಗಂಭೀರವಾಗಿ ಗಾಯಗೊಂಡಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ, ಮಾನ್ವಿ ಪೊಲೀಸರು (manvi police) ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಶವಪರೀಕ್ಷೆಗಾಗಿ ಮಾನ್ವಿ ಶವಗಾರಕ್ಕೆ ಕಳುಹಿಸಿದ್ದು, ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

WhatsApp Group Join Now
Telegram Group Join Now
Share This Article