K2kannadanews.in
Viral video ವೈರಲ್ ಸುದ್ದಿ : ಸಹ ಲೋಕೋ ಪೈಲೆಟ್ ಒಬ್ಬರು ಪ್ರಾಣವನ್ನೇ ಪಣಕ್ಕಿಟ್ಟು, ಸೇತುವೆ ಮೇಲೆ ಏರಲಿಕ್ಕ್ ನಿಂದ ಕೆಟ್ಟು ನಿಂತಿದ್ದ, ರೈಲಿನ ಅಡುಗೆ ಹೋಗಿ ರಿಪೇರಿ ಮಾಡಿ ಸರಿಪಡಿಸಿ, ಮತ್ತೆ ರೈಲು ಹತ್ತಿದ ಸಾಹಸಮಯ ದೃಶ್ಯ, ಇದೀಗ ಸಾಮಾಜಿಕ ಜಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬ್ರಹ್ಮಪುತ್ರ ಮೇಲ್ (1567) ರೈಲು ದೆಹಲಿಯಿಂದ ಕಾಮಖ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಸ್ಸಾಂನ ರಂಗಿಯಾ ಜಂಕ್ಷನ್ ಬಳಿಯ ಬಿಜ್ನಿ ರೈಲು ನಿಲ್ದಾಣ ಮತ್ತು ಪಾಟೀಲದಾಹ ನಡುವಿನ ಸೇತುವೆಯಲ್ಲಿ ಏರ್ ಲೀಕೇಜ್ ಸಮಸ್ಯೆಯಿಂದ ರೈಲು ನಿಂತಿತು ಸಹಾಯಕ ಲೋಕೋ ಪೈಲಟ್ ರಾಮ್‌ಜಿ ಕುಮಾರ್ ಎಂಬವರು ಜೀವದ ಹಂಗು ತೊರೆದು ಸೇತುವೆಯ ಕಿರಿದಾದ ಜಾಗದಲ್ಲಿ ಹೋಗಿ ಸಮಸ್ಯೆಯನ್ನು ಸರಿಪಡಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಈ ಘಟನೆ ಸೆಪ್ಟೆಂಬರ್ 26 ರಂದು ನಡೆದಿದ್ದು, ಸಹಾಯಕ ಲೋಕೋ ಪೈಲಟ್ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರೈಲ್ವೆ ದುರಸ್ತಿ ಮಾಡಿಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಹಾಯಕ ಲೋಕೋ ಪೈಲಟ್ ಪ್ರಾಣದ ಹಂಗು ತೊರೆದು ರೈಲಿನ ಏರ್ ಲೀಕೇಜ್ ಸಮಸ್ಯೆಯನ್ನು ಸರಿಪಡಿಸಿ ಸೇತುವೆಯ ಕಿರಿದಾದ ಜಾಗದಲ್ಲಿ ಮೆಲ್ಲಗೆ ಬಂದು ರೈಲನ್ನು ಏರುವ ಸಾಹಸಮಯ ದೃಶ್ಯವನ್ನು ಕಾಣಬಹುದು. ಇವರ ಈ ಕಾರ್ಯಕ್ಕೆ ಇದೀಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.